

ಚಿಂಚೋಳಿ: ಚಿಮ್ಮಇದಲಾಯಿ ಗ್ರಾಮದಲ್ಲಿ ಅಸಂಖ್ಯಾತ ಭಕ್ತರ ಜೈೂಷದ ಮಧ್ಯೆ ಅದ್ದೂರಿಯಾಗಿ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಮಂಗಳವಾರ ಸಂಜೆ ನಡೆಯಿತು. ಬೆಳಗ್ಗೆ ದೇವಾಲಯದಿಂದ ಪಲ್ಲಕ್ಕಿಯೊಂದಿಗೆ ಪ್ರಭಾವಳಿಯೂ ಥೇರ ಮೈದಾನದವರೆಗೆ ಆಗಮಿಸಿತು. ನಂತರ ಅಪಾರ ಭಕ್ತರು ಶ್ರೀ ವೀರಭದ್ರೇಶ್ವರ ದೇವರ ಅಗ್ಗಿ ತುಳಿದು ಭಕ್ತಿ ಸಮರ್ಪಿಸಿದರು. ಸಂಜೆ 7ಕ್ಕೆ ರಥಕ್ಕೆ ಪೂಜೆ ಸಲ್ಲಿಸಿ ಉತ್ಸವ ಚಾಲನೆ ನೀಡಲಾಯಿತು. ಶ್ರೀ ವೀರಭದ್ರೇಶ್ವರ ಮಹಾರಾಜ್ಕಿ ಜೈ... ಜೈ ವೀರಭದ್ರ ಸೇರಿ ವಿವಿಧ ೂಷಣೆ ಮೊಳಗಿದವು. ಜನರು ರಥಕ್ಕೆ ಬಾಳೆಹಣ್ಣು, ಹೂ, ಉತ್ತತ್ತಿ, ನಾರು, ನಾಣ್ಯ ಸಲ್ಲಿಸಿದರು. ಶಿವಶರಣಪ್ಪ ಪಾಟೀಲ್, ಧರ್ಮರಾವ ಭದ್ರಗೊಂಡ, ಮಲ್ಲಿಕಾರ್ಜುನ ಬೆಳಕೇರಿ, ಲ್ಮಕಾಂತ ಕೋಮಟಿ, ಸೋಮಶೇಖರ ಸ್ವಾಮಿ, ಮಲ್ಲಪ್ಪ ಡೆಂಗಿ, ರೇವಣಸಿದ್ದಪ್ಪ ದಂಡಿನ್, ಶಿವರಾಜ ಮಾಲಿಪಾಟೀಲ್, ಬಸವರಾಜ ಪರಮಗೊಂಡ, ಶಿವರಾಜ ಚಟ್ನಳ್ಳಿ, ಜಗದೇವಯ್ಯ ಸ್ವಾಮಿ, ಶ್ರೀನಿವಾಸ ಚಿಂಚೋಳಿಕರ, ಬಂಡೆಪ್ಪ ಹೊಳ್ಕರ, ಗುಂಡಪ್ಪ ಔರಾದಿ, ಬಂಡೆಪ್ಪ ವಚ್ಚೆದ, ಮಾರುತಿ ಪತಂಗೆ, ಚಂದ್ರಶೇಖರ ಧೂಳಪ್ಪನೂರ, ರಾಜಶೇಖರ ರಾಮಗೊಂಡ, ಸಿದ್ರಾಮಪ್ಪ ಸೂರಪ್ಪನೂರ, ಶರತಚಂದ್ರ ಸೂರಪ್ಪನೋರ, ಶಿವಯೋಗಿ ಚಿಮ್ಮ ಇದಲಾಯಿ, ಸತೀಶ ದೇಸಾಯಿ, ಶಿವರಾಜ್ ದೇಸಾಯಿ, ಯಲ್ಲಾಲಿಂಗ ದಂಡಿನ್, ದೌಲಪ್ಪ ಸುಣಗಾರ, ನಂದಕುಮಾರ ಪೋಲಕಪಳ್ಳಿ, ಕುಪೇಂದ್ರ ಹೂಗಾರ, ಸುರೇಶ ಸ್ವಾಮಿ, ಮಡಯ್ಯ ಸ್ವಾಮಿ, ಸಿದ್ರಾಮಪ್ಪ ಚಂದ್ರಪ್ಪನೋರ, ಸಂತೋಷ ಬಡಿಗೇರ ಇತರರಿದ್ದರು.