

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಇನ್ಸಿನಿಯನ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಎಂಬೆಡೆಡ್ ಎಡ್ಜ್ ಚಾಲೆಂಜ್ ಹ್ಯಾಕಥಾನ್ ಶುಕ್ರವಾರ ನಡೆಯಿತು. ಇನ್ಸಿನಿಯನ್ ಟೆಕ್ನಾಲಜೀಸ್ ಹಿರಿಯ ಪ್ರಿನ್ಸಿಪಾಲ್ ಇಂಜಿನಿಯರ್, ಹಿರಿಯ ನಿರ್ದೇಶಕ ಹಾಗೂ ವಿಭಾಗದ ಹಳೆಯ ವಿದ್ಯಾರ್ಥಿ ಡಾ.ಪ್ರಕಾಶ ಬಾಲಸುಬ್ರಮಣಿಯನ್ ಮಾತನಾಡಿ, ವಿದ್ಯಾರ್ಥಿಗಳು ನೈಜ ಪ್ರಪಂಚದ ಸವಾಲು ಪರಿಹರಿಸುವಲ್ಲಿ ತಮ್ಮ ಕೌಶಲ ಪ್ರದರ್ಶಿಸಲು ಹ್ಯಾಕಥಾನ್ಗಳು ಅವಕಾಶ ಮಾಡಿಕೊಡುತ್ತವೆ. ಇದು ಉದ್ಯೋಗಾವಕಾಶಕ್ಕೆ ಪ್ರಮುಖ ಅಗತ್ಯವಾಗಿದೆ ಎಂದರು. ಅಸಿಸ್ಟೆಂಟ್ ಇಂಜಿನಿಯರ್ ಜಗನ್ ಸಿ., ಪ್ರಾಂಶುಪಾಲ ಡಾ.ಸಿದ್ದರಾಮ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ವಿಭಾಗದ ಮುಖ್ಯಸ್ಥ ಡಾ.ನಾಗೇಂದ್ರ, ಡಾ.ಶ್ರೀಧರ ಕೆ., ಡಾ.ಜೂಹಿ ನಿಷಾತ್ ಅನ್ಸಾರಿ, ಪೊ.ಪಂಕಜ್ ಮಾಹೂರಕರ್, ಪ್ರೊ.ಪ್ರತಿಕ್ ಶಂಕರ, ಪ್ರೊ.ಜ್ಯೋತಿ ಪಾಟೀಲ್, ಡಾ.ನಾಗೇಶ ಸಾಲಿಮಠ, ಪ್ರೊ.ಮೀನಾ ಪಾಟೀಲ್, ಪ್ರೊ.ವೀರಣ್ಣ ಗುಗ್ವಾಡ್, ಪ್ರೊ.ರಾಜಕುಮಾರ ಬೈನೂರ, ಪ್ರೊ.ಸಿ.ಡಿ.ಬೋಗಲೆ, ಪ್ರೊ.ವೀಣಾ ಸರಾಫ್, ಡಾ.ರಾಕೇಶ ಹುಡೇದ್, ಪೊ.ಓಂಕಾರ, ಪೊ.ಗಾಯತ್ರಿ ಮಠ, ಪೊ.ರೇಣುಕಾ ಹಟ್ಟಿ ಇತರರಿದ್ದರು.