ಕೆಂಭಾವಿ ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆರ್ಟ್ ಆಫ್ ಲೀವಿಂಗ್ನ ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮದಿನ ಆಚರಿಸಲಾಯಿತು. ಮೋಹನರೆಡ್ಡಿ ಡಿಗ್ಗಾವಿ, ರಾವೇಂದ್ರ, ನವೀನ, ಶ್ರೀನಿವಾಸ, ವೆಂಗಮಾಂಬ ಎಸ್. ಇತರರಿದ್ದರು.
ಕೆಂಭಾವಿ: ಆರ್ಟ್ಆಫ್ ಲೀವಿಂಗ್ನ ಶ್ರೀ ರವಿಶಂಕರ ಗುರೂಜಿ ಅವರ ಸಂದೇಶ ಸಮಾಜಕ್ಕೆ ದಾರಿದೀಪ ಎಂದು ಆರ್ಟ್ಆಫ್ ಲೀವಿಂಗ್ನ ಪ್ರಮುಖ ಮೋಹನರೆಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆರ್ಟ್ಆಫ್ ಲೀವಿಂಗ್ನ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರೂಜಿ ಅವರು ಕೇವಲ ಒಬ್ಬ ಆಧ್ಯಾತ್ಮಿಕ ಗುರುಗಳಲ್ಲ. ಅವರು ಜಗತ್ತಿಗೆ ಶಾಂತಿ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚೇತನ. ಸುದರ್ಶನ ಕ್ರಿಯೆಯ ಮೂಲಕ ಕೋಟ್ಯಂತರ ಜನರ ಜೀವನದಲ್ಲಿ ನೆಮ್ಮದಿ ತಂದಿದ್ದಾರೆ. ಒತ್ತಡ ಮುಕ್ತ ಸಮಾಜ ನಿರ್ಮಾಣ ಮಾಡುವ ಅವರ ಸಂಕಲ್ಪ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.