ಗುಲ್ಬರ್ಗ ವಿವಿ ಸಿಂಡಿಕೇಟ್​ ಸದಸ್ಯರಿಗೆ ಸತ್ಕಾರ

ಸ್ಯಾಟ್​ಲೈಟ್​ ಬಸ್​ ನಿಲ್ದಾಣಕ್ಕೆ ಜಮೀನು ಮಂಜೂರು ಮಾಡಲು ಸಹಕರಿಸಿದ ಗುಲ್ಬರ್ಗ ವಿವಿ ಸಿಂಡಿಕೇಟ್​ ಸದಸ್ಯರನ್ನು ಕಲಬುರಗಿ ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಬುಧವಾರ ಸತ್ಕರಿಸಿದರು. ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಕುಲಸಚಿವ ಪ್ರೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರ್​, ವಿತ್ತಾಧಿಕಾರಿ ಜಯಾಂಬಿಕಾ ಇತರರಿದ್ದರು.
ಸ್ಯಾಟ್​ಲೈಟ್​ ಬಸ್​ ನಿಲ್ದಾಣಕ್ಕೆ ಜಮೀನು ಮಂಜೂರು ಮಾಡಲು ಸಹಕರಿಸಿದ ಗುಲ್ಬರ್ಗ ವಿವಿ ಸಿಂಡಿಕೇಟ್​ ಸದಸ್ಯರನ್ನು ಕಲಬುರಗಿ ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಬುಧವಾರ ಸತ್ಕರಿಸಿದರು. ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಕುಲಸಚಿವ ಪ್ರೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರ್​, ವಿತ್ತಾಧಿಕಾರಿ ಜಯಾಂಬಿಕಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಟಲೈಟ್​ ಬಸ್​ ನಿಲ್ದಾಣಕ್ಕೆ ಜಮೀನು ಮಂಜೂರು
  • ನಗರ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು
ಕಲಬುರಗಿ: ಸೇಡಂ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ಸುಗಮ ಸಂಚಾರಕ್ಕೆ ಉದ್ದೇಶಿತ ಗುಲ್ಬರ್ಗ ವಿಶ್ವವಿದ್ಯಾಲಯದ ಬಳಿ ಸ್ಯಾಟಲೈಟ್​ ಬಸ್​ ನಿಲ್ದಾಣ ನಿರ್ಮಿಸಲು 2 ಎಕರೆ ಜಮೀನು ಕೆಕೆಆರ್​ಟಿಸಿ ಸಂಸ್ಥೆಗೆ ಮಂಜೂರು ಮಾಡಿದ ಗುಲ್ಬರ್ಗ ವಿ.ವಿ.ಸಿಂಡಿಕೇಟ್​ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲರು ಸಿಂಡಿಕೇಟ್​ ಸದಸ್ಯರನ್ನು ಬುಧವಾರ ಸತ್ಕರಿಸಿ, ಅಭಿನಂದಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಉದ್ದೇಶಿತ ಸೇಡಂ ಮಾರ್ಗದಲ್ಲಿ ಸ್ಯಾಟಲೈಟ್​ ಬಸ್​ ನಿಲ್ದಾಣ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಬೇಕೆಂಬ ಸಂಸ್ಥೆಯ ಪ್ರಸ್ತಾವನೆಗೆ ವಿವಿ ಸಿಂಡಿಕೇಟ್​ ಸಮಿತಿಯು ಸಾರ್ವಜನಿಕ ಹಿತಾಸಕ್ತಿ ಮತ್ತು ಜನಸೇವೆಯ ದೃಷ್ಟಿಯಿಂದ ಜಮೀನು ಮಂಜೂರಾತಿಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಕಲಬುರಗಿ ನಗರದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಅರುಣಕುಮಾರ ಪಾಟೀಲ ಹೇಳಿದರು.
ಜಮೀನು ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ, ಉನ್ನತ ಶಿಕ್ಷಣ ಸಚಿವರೂ ಆದ ಗುಲ್ಬರ್ಗ ವಿವಿ ಸಮ ಕುಲಾಧಿಪತಿ ಡಾ.ಎಂ.ಸಿ.ಸುಧಾಕರ್​, ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಕನೀಜ್​ ಫಾತಿಮಾ ಅವರ ಸಹಕಾರ ಹಾಗೂ ಬೆಂಬಲವನ್ನು ಕೊಂಡಾಡಿದರು.
ಕುಲಪತಿ ಪ್ರೊ.ಶಶಿಕಾಂತ ಎಸ್​.ಉಡಿಕೇರಿ, ಕುಲಸಚಿವ ರಮೇಶ ಲಂಡನ್ಕರ್​, ಮೌಲ್ಯಾಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರ್​, ವಿತ್ತಾಧಿಕಾರಿ ಜಯಾಂಬಿಕಾ, ಸಿಂಡಿಕೇಟ್​ ಸದಸ್ಯರಾದ ಉದಯಕಾಂತ ಪಾಟೀಲ, ಪೀರ್​ ಜಾದ್​ ಫಹಿಮುದ್ದೀನ್​, ಮಲ್ಲಣ್ಣ ಮಡಿವಾಳ, ರಾವೇಂದ್ರ ಭೈರಪ್ಪ, ಸಿದ್ದಪ್ಪ ಸುಳ್ಳದ ಇತರರಿದ್ದರು.
"

ನಿಗಮದಿಂದ ಸ್ಯಾಟಲೈಟ್​ ಬಸ್​ ನಿಲ್ದಾಣ ನಿರ್ಮಾಣಗೊಂಡ ಬಳಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟೂ ಅನುಕೂಲವಾಗಲಿದೆ. ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಬಸ್​ ಸೇವೆ ಕಲ್ಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು.

— ಅರುಣಕುಮಾರ ಎಂ.ವೈ.ಪಾಟೀಲ್​, ಅಧ್ಯಕ್ಷ, ಕೆಕೆಆರ್​ಟಿಸಿ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net