ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ

ಅಫಜಲಪುರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಂಕರ ರಾಠೋಡ್​, ರೇಣುಕಾ ಶಂಕರ
ಅಫಜಲಪುರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಂಕರ ರಾಠೋಡ್​, ರೇಣುಕಾ ಶಂಕರ
Published on
ಅಫಜಲಪುರ: ರಾಜ್ಯ ಸರ್ಕಾರದ ಮಹತ್ವಾಕಾಂ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಜತೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದುಕೊಂಡ ಫಲಾನುಭವಿಗಳ ಯಶೋಗಾಥೆ ಸಿದ್ಧಪಡಿಸಿ ಕಳಿಸಬೇಕು. ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದರು.
ತಾಪಂ ಇಒ ಶಂಕರ ರಾಠೋಡ್​ ಮಾತನಾಡಿ, ಯುವನಿಧಿ ಮತ್ತು ಗೃಹಲ್ಮ ಹಣಕ್ಕೆ ಕೆವೈಸಿ ತೊಂದರೆಯಿದ್ದು, ಅದನ್ನು ಪರಿಹರಿಸಬೇಕು. ಗ್ರಾಪಂ, ಕೆಕೆಆರ್​ಟಿಸಿ, ಜೆಸ್ಕಾಂ ಕಚೇರಿಗಳಲ್ಲಿ ಸಭೆ ಮಾಡಿ ಸೌಲಭ್ಯ ಪಡೆಯಲು ಜನರಿಗೆ ಜಾಗೃತಿ ಮೂಡಿಸಬೇಕು. ಶೇ.100 ಪ್ರಗತಿ ಸಾಧಿಸಿ ಜಿಲ್ಲೆಯಲ್ಲಿಯೇ ನಂ.1 ಆಗೋಣ ಎಂದು ಹೇಳಿದರು.
ಪ್ರಮುಖರಾದ ದತ್ತಪ್ಪ ಘಾಣೂರ, ರಾಜಕುಮಾರ ಬಬಲಾದ, ಗಾಲೀಬ್​ ಮುಜಾವರ, ಪ್ರವಿಣ ಕಲ್ಲೂರ್​, ಬಿಸ್ಮಿಲ್ಲಾ ಶಹಜಾನ್​, ದುಂಡು ಜಮಾದಾರ, ಅಧಿಕಾರಿಗಳಾದ ರೇಣುಕಾ ಶಂಕರ, ಪ್ರವಿಣ ಹೇರೂರ, ನಾಗರಾಜ ಕೆ., ಖೈಮುದ್ದಿನ್​, ಭಾರತಿ ಪಾಟೀಲ್​, ರವಿ ನಾಯ್ಕೋಡಿ, ಶರಣಪ್ಪ ಇತರರಿದ್ದರು.
ಪಡಿತರ ಅಂಗಡಿ ತಿಂಗಳು ಪೂರ್ತಿ ತೆರೆದಿರಲಿ
ತಾಲೂಕಿನ ಪಡಿತರ ಅಂಗಡಿಗಳು ತಿಂಗಳ ಪೂರ್ತಿ ಗ್ರಾಹಕರಿಗೆ ಧಾನ್ಯ ವಿತರಿಸುತ್ತಿಲ್ಲ, ಟೋಕನ್​ ನೀಡಲು ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಕಾಶ ಜಮಾದಾರ, ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲಿಸಬೇಕು. ಈ ವೇಳೆ ಯಾವುದಾದರೂ ತಪ್ಪು ಕಂಡುಬಂದರೆ ನೋಟಿಸ್​ ನೀಡಿ ಕ್ರಮಕ್ಕೆ ಮುಂದಾಗಬೇಕು. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಹೆಲ್ಪ್​ಲೈನ್​ ನಂಬರ್​ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಭಾರತಿ ಪಾಟೀಲ್​ ಅವರಿಗೆ ತಾಕೀತು ಮಾಡಿದರು.
"

ಗೃಹಲಕ್ಷ್ಮಿ ಯೋಜನೆಯಡಿ 52,880 ಫಲಾನುಭವಿಗಳ ಖಾತೆಗೆ ಫೆಬ್ರವರಿವರೆಗೆ ಸುಮಾರು 300 ಕೋಟಿ ರೂ.ಗೂ ಅಧಿಕ ಮೊತ್ತ ಜಮೆಯಾಗಿದೆ. ಗೃಹಜ್ಯೋತಿಯಲ್ಲಿ ಅಫಜಲಪುರ ಮತ್ತು ಚೌಡಾಪುರ ಉಪ ವಿಭಾಗಗಳು ಸೇರಿಸಿ 43,448 ಫಲಾನುಭವಿಗಳಿಗೆ 56.56 ಕೋಟಿ ರೂ. ಹಣ ಜಮೆಯಾಗಿದೆ. ಶಕ್ತಿ ಯೋಜನೆಯಡಿ 1,59,03,321 ಮಹಿಳೆಯರು ಪ್ರಯಾಣಿಸಿದ್ದು, 65.61 ಕೋಟಿ ರೂ. ವ್ಯಯಿಸಲಾಗಿದೆ. ಯುವನಿಧಿಯಲ್ಲಿ 2,961 ವಿದ್ಯಾರ್ಥಿಗಳಿಗೆ 6.90 ಕೋಟಿ ರೂ. ಹಣ ಜಮೆಯಾಗಿದೆ.

— > ಪ್ರಕಾಶ ಜಮಾದಾರ, ತಾಲೂಕು ಅಧ್ಯ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net