‘ಗ್ಯಾರಂಟಿ ಪಲಾನುಭವಿಗಳು ಆತಂಕ ಪಡಬೇಕಿಲ್ಲ

ಯಾದಗಿರಿಯ ಬಸವೇಶ್ವರ ನಗರದಲ್ಲಿ ಜೆಸ್ಕಾಂ ಇಇ ರಾವೇಂದ್ರ ನೇತೃತ್ವದಲ್ಲಿ ಮನೆ, ಮನೆಗೆ ತೆರಳಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆ ಪರಿಶೀಲಿಸಲಾಯಿತು. ಜೆಸ್ಕಾಂ ಎಇಇ ಮಾರ್ಕಂಡೇಶ್ವರ ಮತ್ತು ಅಧಿಕಾರಿಗಳಾದ ಜೆ.ಟಿ.ರಾಠೋಡ್​, ಸಂಜೀವಕುಮಾರ, ಸುರೇಖಾ ಕಟ್ಟಿಮನಿ, ಶ್ವೇತಾ ದಾಸನಕೆರಿ, ದೇವೇಂದ್ರಪ್ಪ, ಮೊಹನ್​, ಆನಂದ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಇಇ ರಾವೇಂದ್ರ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ
  • ಗೃಹ ಜ್ಯೋತಿ ಮರು ಪರಿಶೀಲನೆ
ಯಾದಗಿರಿ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲೆಡೆ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ಅದರಂತೆ ಬುಧವಾರ ಬಸವೇಶ್ವರ ನಗರದಲ್ಲಿ ಜೆಸ್ಕಾಂ ಇಇ ರಾವೇಂದ್ರ ಅವರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ, ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು, ಮೀಟರ್​ ರೀಡರ್​ಗಳ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಫಲಾನುಭವಿಗಳ ಅಗತ್ಯ ದಾಖಲೆಗಳ ಮಾಹಿತಿ ಪರಿಶೀಲಿಸಿದ ಜೆಸ್ಕಾಂ ಅಧಿಕಾರಿಗಳ ತಂಡ, ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗೆ ಮರು ಪರಿಶೀಲನೆ ಮಾಡಲು ಆಗಮಿಸಿದಾಗ ಅಗತ್ಯ ಮಾಹಿತಿ ನೀಡಬೇಕು ಎಂದು ಹೇಳಿದರು.
ಈ ವೇಳೆ ಜೆಸ್ಕಾಂ ಇಇ ರಾವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 236072 ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿದ್ದು, ಈಗ ಮರು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಆಧಾರ್​ ಕಾರ್ಡ್​, ಪಡಿತರ ಕಾರ್ಡ್​, ಚುನಾವಣೆ ಗುರುತಿನ ಚೀಟಿ ಕಾರ್ಡ್​, ತೆರಿಗೆ ಪಾವತಿದಾರರಿದ್ದಾರೆ. ಪಾನ್​ ಕಾರ್ಡ್​ ತೊರಿಸಿದರೆ ದಾಖಲೆ ಪರಿಶೀಲನೆ ಮಾಡಿ ನೋಂದಣಿ ಮಾಡಲಾಗುತ್ತದೆ ಎಂದರು. ಫಲಾನುಭವಿಗಳು ಕರ್ನಾಟಕ ರಾಜ್ಯದವರಾಗಿರಬೇಕು. ಅನ್ಯ ರಾಜ್ಯದವರಿಗೆ ಈ ಯೋಜನೆಯಿಂದ ಅನ್ವಯಿಸುವುದಿಲ್ಲ. ಆದರೆ ಈ ಬಗ್ಗೆ ಸ್ಥಳಿಯರು ವಿನಾ@ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಜೆಸ್ಕಾಂ ಎಇಇ ಮಾರ್ಕಂಡೇಶ್ವರ ಮತ್ತು ಅಧಿಕಾರಿಗಳಾದ ಜೆ.ಟಿ.ರಾಠೋಡ್​, ಸಂಜೀವಕುಮಾರ, ಸುರೇಖಾ ಕಟ್ಟಿಮನಿ, ಶ್ವೇತಾ ದಾಸನಕೆರಿ, ದೇವೇಂದ್ರಪ್ಪ, ಮೊಹನ್​, ಆನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net