ವಿಶ್ವವಿದ್ಯಾಲಯಕ್ಕೆ ವಾರ್ಷಿಕ 87 ಕೋಟಿ ರೂ. ವೆಚ್ಚವಾಗುತ್ತಿದ್ದು, ಆದರೆ ವಾರ್ಷಿಕ 59 ಕೋಟಿ ರೂ. ಆದಾಯ ಬರುತ್ತಿದೆ. ಇನ್ನುಳಿದ 27 ಕೋಟಿ ರೂ. ಹೊಂದಿಸುವುದು ದೊಡ್ಡ ಸವಾಲಾಗಿದೆ. ಸರ್ಕಾರ ಪೂರ್ಣಾವಧಿ ನೌಕರರಿಗೆ (ಬೋಧಕ ಮತ್ತು ಬೋಧಕೇತರ) ವಾರ್ಷಿಕ 31.9ಕೋಟಿ ರೂ. ವೇತನ ರೂಪದಲ್ಲಿ ನೀಡುತ್ತಿದೆ. ಪಿಂಚಣಿಗಾಗಿ ವಾರ್ಷಿಕ 54 ಕೋಟಿ ರೂ. ರ್ಖಚಾಗುತ್ತಿದ್ದು, ಈ ಪೈಕಿ ಸರ್ಕಾರ ಕೇವಲ 20 ಕೋಟಿ ರೂ. ನೀಡಿದೆ. ಆಡಳಿತಾತ್ಮಕ, ಪರೀಕ್ಷಾಂಗದ ವೆಚ್ಚ ಸೇರಿ ಇತರೆ ಖರ್ಚುಗಳೂ ಇವೆ. ಪಿಂಚಣಿಯ ಒಟ್ಟು ಮೊತ್ತದಲ್ಲಿ ವಿಶ್ವವಿದ್ಯಾಲಯ ಶೇ.75 ಹಣ ಭರಿಸಬೇಕಿದ್ದು, ಇಲ್ಲದಿದ್ದರೆ ನೀಡುವ ಅನುದಾನವೂ ಕಡಿತಗೊಳಿಸುವುದಾಗಿ ರಾಜ್ಯ ಸರ್ಕಾರ ತಾಕೀತು ಮಾಡಿದೆ.