ಐತಿಹಾಸಿಕ, ಪೌರಾಣಿಕಥೆ, ಭಕ್ತಿ, ಪುರಾಣ ಅಂದಿನ ಕಾಲದ ಉಡುಗೆ ತೊಡುಗೆ ಎಲ್ಲವೂ ಅವರ ಸಿನಿಮಾದಲ್ಲಿ ಜನರಿಗೆ ಒಂದು ಮೌಲ್ಯಯುತವಾಗಿ ತಿಳಿಸುವ ಕೆಲಸ ಮಾಡಿವೆ. ನಟನೆಗೆ ಶಿಕ್ಷಣದ ಅವಶ್ಯಕತೆಯಿಲ್ಲ ಸ್ಪಷ್ಟವಾದ ಮಾತುಗಾರಿಕೆ, ಉಚ್ಛಾರ ಒಂದು ದೇವರ ವರ. ಅದು ಡಾ.ರಾಜಕುಮಾರ್ ಅವರಿಗೆ ಇತ್ತು. ಐತಿಹಾಸಿಕ ಸಿನಿಮಾದಲ್ಲಿ ಹೇಳುವಂತಹ ಸಂಭಾಷಣೆಯನ್ನು ನೋಡಬಹುದು. ರಾಜನಾಗಿ, ರಾಕ್ಷಸ, ದರೋಡೆಕೋರ, ಕಳ್ಳ, ಖಳನಾಯಕ, ಭಕ್ತನಾಗಿ, ಬಡವನಾಗಿ, ಹುಚ್ಚನಾಗಿ ಕೊನೆಗೆ ದೇವರಾಗಿ ನಟಿಸಿದಂತಹ ಏಕೈಕ ವ್ಯಕ್ತಿಯಾಗಿದ್ದಾರೆ. ಇತಿಹಾಸವನ್ನು ಓದುವುದಕ್ಕಿಂತ ರಾಜಕುಮಾರ ನಟಿಸಿದ ರಾಘವಾಂಕ, ಕಂಠಿರವ, ವೀರಕೇಸರಿ, ಇಮ್ಮಡಿ ಪುಲಕೇಶಿ, ಸರ್ವಜ್ಞಮೂರ್ತಿ, ಶ್ರೀಕೃಷ್ಣದೇವರಾಯ ಮುಂತಾದ ಚಿತ್ರಗಳಲ್ಲಿ ಅವರ ಸಹಜ ನಟನೆಯಿಂದ ಇತಿಹಾಸ ತಿಳಿಸಿದ ದೊಡ್ಡ ನಟನಾಗಿ ಕನ್ನಡದ ಅಸ್ಮಿತೆಯನ್ನು ಜನರ ಮನಸ್ಸಿನಲ್ಲಿ ರೂಪಗೊಳ್ಳುವಂತೆ ಮತ್ತು ಬದುಕಿನ ಮೌಲ್ಯವನ್ನು ಕಟ್ಟಿಕೊಳ್ಳುವಂತೆ ಮಾಡಿವೆ ಎಂದರು.