ಮಹಾಂತ ಶ್ರೀಗಳ ಆದರ್ಶ ಅನುಕರಣೀಯ

ಮಮದಾಪುರ ಗ್ರಾಮದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಕೀರ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗೌರಿಶಂಕರ ಶಿವಾಚಾರ್ಯರು ಇದ್ದರು.
ಮಮದಾಪುರ ಗ್ರಾಮದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಕೀರ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗೌರಿಶಂಕರ ಶಿವಾಚಾರ್ಯರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಮಮಾದಾಪುರ
ಬಾಲಲೀಲಾ ಮಹಾಂತ ಶಿವಯೋಗಿಗಳ ಸರಳತೆ, ವೆರಾಗ್ಯ ಮತ್ತು ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಲೌಕಿಕ ಭೋಗ&ಭಾಗ್ಯಗಳಿಗೆ ಅಂಟಿಕೊಳ್ಳದೆ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿದ ಆದರ್ಶ ಜೀವನ ಅನುಕರಣೀಯ ಎಂದು ಶಿರಹಟ್ಟಿ ಕೀರೇಶ್ವರ ಸಂಸ್ಥಾನ ಮಠದ ಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಮಹಾಮಠದಲ್ಲಿ ಅಧಿಕಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಿತ್ಯ ಓಂ ನಮ@ ಶಿವಾಯ ಮಂತ್ರ ಜಪಿಸುವ ಜತೆಗೆ ಒಂದಿಲ್ಲೊಂದು ಸಮಾಜಮುಖಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಶ್ರೇಯೋಭಿವದ್ಧಿ ಹಾಗೂ ಭಕ್ತರ ಒಳಿತಿಗಾಗಿ ಶ್ರಮಿಸುತ್ತಿರುವ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಪ್ರವಚನಕಾರ ವೀರಯ್ಯಶಾಸ್ತ್ರಿ ಚರಂತಿಮಠ ಮಾತನಾಡಿ, ಬಾಲಲೀಲಾ ಮಹಾಂತ ಶಿವಯೋಗಿಗಳು ರಾಜ&ಮಹಾರಾಜರ ಸನ್ಮಾನಗಳಿಗೆ ಅಂಟಿಕೊಳ್ಳದ, ಯಾರ ಹಂಗಿಗೂ ಒಳಗಾಗದ ರ್ನಿಭಿಡೆಯ ಯೋಗಿ, ಜನಸಾಮಾನ್ಯರ ಸಂಕಷ್ಟಗಳನ್ನು ದೂರಗೊಳಿಸಿ, ಭಕ್ತಿಯೇ ಶಿವನೊಲುಮೆಗೆ ಸಾಧನವೆಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಎಂದರು.
ಶ್ರೀಮಠದ ವತಿಯಿಂದ ಶಿರಹಟ್ಟಿಯ ಕೀರೇಶ್ವರ ಮಠದ ಸಿದ್ಧರಾಮ ಸ್ವಾಮೀಜಿ ಅವರ ಸಾಮೂಹಿಕ ಪಾದಪೂಜೆ ನೆರವೇರಿಸಲಾಯಿತು. ತೋರಣಗಟ್ಟಿ ಮುದೆಣ್ಣವರ ದಂಪತಿ ಸುಮಂಗಲೆಯರಿಗೆ ಉಡಿ ತುಂಬಿದರು. ಬಿಜಗುಪ್ಪಿಯ ಸತ್ಯಪ್ಪ ಶಂಕರೆಪ್ಪಗೋಳ ದಾಸೋಹ ಸೇವೆ ಸಲ್ಲಿಸಿದರು.
ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಮಂಜುನಾಥ ಶರಣರು, ಬಸವರಾಜ ಹಿರೇಮಠ, ಶಂಕರೆಪ್ಪ ಪಟಾತ, ಶ್ರೀಶೈಲ ಕಮತ, ಈರಪ್ಪ ಅಜ್ಜಣ್ಣವರ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net