ಅಕ್ಕಲಕೋಟ ತಾಲೂಕಿನ ಬೋರೋಟಿ (ಖು) ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಲ ವಾರಕರಿ ದಿಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿದ್ದಾರಾಮ ಬಿರಾಜದಾರ, ಗೋಪಾಲ ಲೋಹಾರ, ರಾಜು ಹಾಲೊಳ್ಳಿ, ಚಂದ್ರಕಾಂತ ಬಿರಾಜದಾರ, ಠಕ್ಕಪ್ಪ ಸನಗುಂದಿ, ಮುಸ್ತಫಾ ಆತಾರ್, ಶರಣು ಚನಗೆ, ಸಚಿನ್ ಕೋಳಿ, ಲಕ್ಷ್ಮಣ ನಾವಿ, ಶರಣಪ್ಪ ಫುಲಾರಿ, ಇತರರಿದ್ದರು.
ಅಕ್ಕಲಕೋಟ: ಆಷಾಢ ಏಕಾದಶಿ ನಿಮಿತ್ತ ಬೋರೋಟಿ (ಖು.) ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ಬಾಲ ವಾರಕರಿ ದಿಂಡಿ ಹಾಗೂ ಗ್ರಂಥ ದಿಂಡಿ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು. ವಿದ್ಯಾರ್ಥಿಗಳು ವಾರಕರಿ ಸಂಪ್ರದಾಯವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಶ್ರೀ ವಿಠ್ಠಲ, ರುಕ್ಮಿಣಿ, ಸಂತ ಜ್ಞಾನೇಶ್ವರ, ಸಂತ ತುಕಾರಾಮ ಮಹಾರಾಜ ಮೊದಲಾದವರ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದು ಇಡೀ ಗ್ರಾಮ ಭಕ್ತಿಮಯ ವಾತಾವರಣದಿಂದ ಕೂಡಿತ್ತು.
ಆರಂಭದಲ್ಲಿ ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಸಿದ್ದಾರಾಮ ಬಿರಾಜದಾರ ಹಾಗೂ ಸದಸ್ಯರಾದ ಗೋಪಾಲ ಲೋಹಾರ, ರಾಜು ಹಾಲೊಳ್ಳಿ, ಚಂದ್ರಕಾಂತ ಬಿರಾಜದಾರ, ಠಕ್ಕಪ್ಪ ಸನಗುಂದಿ, ಮುಸ್ತಫಾ ಆತಾರ್, ಶರಣು ಚನಗೆ, ಸಚಿನ್ ಕೋಳಿ, ಲಕ್ಷ$್ಮಣ ನಾವಿ ಅವರಿಂದ ಗ್ರಂಥ ದಿಂಡಿ ಹಾಗೂ ಪಾಲಖಿಗೆ ಪೂಜೆ ಸಲ್ಲಿಸಿ ಪುಷ್ಪವೃಷ್ಠಿ ಮಾಡಿ ದಿಂಡಿಗೆ ಚಾಲನೆ ನೀಡಲಾಯಿತು.
ಶಾಲೆಯ ವಿದ್ಯಾರ್ಥಿಗಳೆ ಡೊಳ್ಳು, ತಾಳ ಹಾಗೂ ಮೃದಂಗ ವಾದ್ಯಗಳನ್ನು ನುಡಿಸುತ್ತಾ ದಿಂಡಿಗೆ ಮುನ್ನಡೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ದಿಂಡಿಯಲ್ಲಿ "ಸಸಿ ನೆಡಿ&ಬರ ಅಳಿಸಿ", "ಸ್ವಚ್ಛ ಗ್ರಾಮ&ಸುಂದರ ಗ್ರಾಮ', "ಶಿಕ್ಷಣ ನಮ್ಮ ಹಕ್ಕು", "ನೀರು ಉಳಿಸಿ &ನೀರು ಸಂರಕ್ಷಿಸಿ" ಎಂಬ ಸಾಮಾಜಿಕ ಜಾಗೃತಿ ಘೋಷಣೆಗಳ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.
ಗ್ರಾಮದ ಆರಾಧ್ಯ ದೈವ ಕಾಶಿಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಗೋಲ ರಿಂಗಣ ಸಮಾರಂಭ ಪ್ರಮುಖ ಆಕರ್ಷಣೆಯಾಯಿತು. ಸಾಂಸತಿಕ ವಿಭಾಗದ ಮುಖ್ಯಸ್ಥ ಶರಣಪ್ಪ ಫುಲಾರಿ, ಅನಂತ ಬಂಗಾರ, ಮುಖ್ಯೋಪಾಧ್ಯಾಯಿನಿ ರಾಜಶ್ರೀ ತಾಂಬೆ ಹಾಗೂ ಅಂಜಲಿ ವಾಘಮಾರೆ ಇತರರು ಭಾಗವಹಿಸಿದ್ದರು.