ಈ ವರ್ಷ ಸರ್ಕಾರಿ ಶಾಲೆಗಳಾಗಲಿವೆ ಸ್ಮಾರ್ಟ್

ಕೆಪಿಎಸ್ ಹೊಂಗಸಂದ್ರ ಶಾಲೆ
ಕೆಪಿಎಸ್ ಹೊಂಗಸಂದ್ರ ಶಾಲೆ
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರು ಮತ್ತು ಮಕ್ಕಳಿಗೆ ಮುಖಚಹರೆ ಆಧಾರಿತ ಆನ್‌ಲೈನ್ ಹಾಜರಾತಿ
  • ದ್ವಿಭಾಷಾ ಮಾಧ್ಯಮ ಶಾಲೆಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಇತರೆ ಕೆಲವು ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ
  • 6ನೇ ತರಗತಿ ಮಕ್ಕಳಿಗೆ ಕೌಶಲ ಶಿಕ್ಷಣ ಸೇರಿ ಹಲವು ಯೋಜನೆಗಳು ಸರ್ಕಾರಿ ಶಾಲೆ ದೃಷ್ಟಿಯಿಂದ ಉತ್ತಮ ಆರಂಭ
  • ಸಮರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಏರುಗತಿಯಲ್ಲಿ ಸಾಗಲು ಪೂರಕವಾಗಿರಲಿವೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಇಂದು (ಜೂ.1) 2026-27ನೇ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ಈ ವರ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಂದಿಷ್ಟು, ಸ್ಮಾರ್ಟ್ ಆಗಲಿವೆ.
ಶಿಕ್ಷಕರು ಮತ್ತು ಮಕ್ಕಳಿಗೆ ಮುಖಚಹರೆ ಆಧಾರಿತ ಆನ್‌ಲೈನ್ ಹಾಜರಾತಿ, ದ್ವಿಭಾಷಾ ಮಾಧ್ಯಮ ಶಾಲೆಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಇತರೆ ಕೆಲವು ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ಸರ್ಕಾರ ಚಿಂತನೆ ನಡೆಸಿದೆ. 6ನೇ ತರಗತಿ ಮಕ್ಕಳಿಗೆ ಕೌಶಲ ಶಿಕ್ಷಣ ಸೇರಿ ಹಲವು ಯೋಜನೆಗಳು ಸರ್ಕಾರಿ ಶಾಲೆ ದೃಷ್ಟಿಯಿಂದ ಉತ್ತಮ ಆರಂಭವನ್ನು ಒದಗಿಸಲಿವೆ. ಸಮರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಏರುಗತಿಯಲ್ಲಿ ಸಾಗಲು ಪೂರಕವಾಗಿರಲಿವೆ ಎಂದು ಅಂದಾಜಿಸಲಾಗಿದೆ.

ಶಿಕ್ಷಕರಿಗೆ ಕರ್ತವ್ಯ ಆೃಪ್:

ಈ ವರ್ಷದ ಮೊದಲ ದಿನದಿಂದಲೇ ಶಿಕ್ಷಕರು ಮತ್ತು ಇಲಾಖೆ ಸಿಬ್ಬಂದಿಗೆ ನಿಖರ ಸಮಯಕ್ಕೆ ಹಾಜರಾಗಬೇಕು ಮತ್ತು ಸಂಜೆ ವೇಳೆಯೂ ಸಮಯಪಾಲನೆ ಮಾಡಬೇಕು ಎಂಬ ಕಾರಣದಿಂದ ಹಾಜರಾತಿಗಾಗಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇನ್ನು ಮುಂದೆ ಶಿಕ್ಷಕರು ‘ಕರ್ತವ್ಯ’ ಆೃಪ್‌ನಲ್ಲಿ ಹಾಜರಾತಿಯನ್ನು ದಾಖಲಿಸಬೇಕು. ಸಬೂಬು ಹೇಳದೆ ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಹಾಜರಾಗಬೇಕು.
ಸರ್ಕಾರಿ ಶಾಲೆಗಳ ಮಟ್ಟಿಗೆ ಈ ಯೋಜನೆಯು ವರವಾಗಲಿದೆ. ಕೆಲವು ಕಡೆ ಹತ್ತಾರು ರೀತಿಯ ಕಾರಣಗಳನ್ನು ಕನಿಷ್ಠ ಅರ್ಧ ಗಂಟೆಗೂ ಹೆಚ್ಚಿನ ಕಾಲ ಶಿಕ್ಷಕರು ಶಾಲೆಗಳಿಗೆ ತಡವಾಗಿ ಆಗಮಿಸುವುದು ಸಾಮಾನ್ಯವಾಗಿದೆ. ಈ ತೊಂದರೆಗೆ ಕೊನೆಯಾಡಿದಂತಾಗಲಿದೆ.

ಶಾಲಾ ಮಕ್ಕಳಿಗೆ ನಿರಂತರ

ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಮುಖಚಹರೆ ಆಧಾರಿತ ಹಾಜರಾತಿಯನ್ನು 2026-27ನೇ ಸಾಲಿನ ಮೊದಲ ದಿನದಿಂದಲೇ ಜಾರಿಗೊಳಿಸಲು ‘ನಿರಂತರ’ ಎಂಬ ಮೊಬೈಲ್ ಆೃಪ್ ಸಿದ್ಧಪಡಿಸಿದ್ದು, ಈ ಕಾರ್ಯಕ್ರಮದ ಜಾರಿಗೆ 2.16 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣ ಇಲಾಖೆಯು ಈಗಾಗಲೇ ಬಿಡುಗಡೆ ಮಾಡಿದೆ.
ಇದರಿಂದ ಮಕ್ಕಳ ಸಂಖ್ಯೆ ಹೆಚ್ಚು ತೋರಿಸಿ ಸರ್ಕಾರಿ ಯೋಜನೆಗಳನ್ನು ಮತ್ತು ಅನುದಾನದ ದುರ್ಬಳಕೆ ತಪ್ಪಿಸುವುದು ಯೋಜನೆಯ ಮುಖ್ಯ ಆಶಯವಾಗಿದೆ. ಪ್ರೋತ್ಸಾಹಕ ಯೋಜನೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಾಗಿ ತೋರಿಸುವುದನ್ನು ಕಾನೂನು ಬಾಹಿರ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ

ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಶಿಕ್ಷಣ ಇಲಾಖೆಯು ಈ ಯೋಜನೆಯನ್ನು ೋಷಿಸಿದೆ. ಆದರೆ, ಕೆಲವು ಕಡೆ ಮಾತ್ರ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಕೆಪಿಎಸ್ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳು ಹಾಗೂ ಶಿಕ್ಷಕರ ಲಭ್ಯತೆ ಇರುವುದರಿಂದ ಜಾರಿಗೆ ಬರಬಹುದು. ಈ ಸಂಬಂಧ ಇಲಾಖೆಯು ಇನ್ನೂ ಸಿದ್ಧತೆಯ ಹಂತದಲ್ಲಿದೆ.

ದಾಖಲಾತಿ ಹೆಚ್ಚಳಕ್ಕೆ ಗುರಿ

ರಾಜ್ಯಾದ್ಯಂತ 41 ಸಾವಿರ ಪ್ರಾಥಮಿಕ ಮತ್ತು 5 ಸಾವಿರ ಪ್ರೌಢ ಶಾಲೆ ಸೇರಿ 46 ಸಾವಿರ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅಂದಾಜು 38 ಲಕ್ಷ ಮಕ್ಕಳು ದಾಖಲಾಗುವ ನಿರೀಕ್ಷೆ ಮಾಡಲಾಗಿದೆ. ಈ ಬಾರಿ ಶೇ.10ರಷ್ಟು ಮಕ್ಕಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎಂಬ ಗುರಿಯನ್ನು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net