ಸರ್ಕಾರ ಹೊರಡಿಸಿರುವ ಕರಡು ನಿಯಮಗಳಲ್ಲಿ ಪ್ರಮುಖವಾಗಿ, ಬೆಂಗಳೂರಿನ ನಿವಾಸಿಗಳು ಮನೆಯ ಮುಂದಿನ ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ರೆ, ಅದರ ಮಾಲೀಕರು ರಸ್ತೆಯನ್ನು ಪಾರ್ಕಿಂಗ್ ಮಾಡಿಕೊಳ್ಳುವ ಹಿನ್ನೆಲೆ ವಾರ್ಷಿಕವಾಗಿ 25,000 ರೂ.ವರೆಗಿನ ಶುಲ್ಕವನ್ನು ಪಾವತಿಸುವ ಪ್ರಸ್ತಾಪವನ್ನು ಸೇರಿಸಲಾಗಿದೆ. ಸಣ್ಣ ಕಾರುಗಳಿಗೆ 15,000 ರೂ. ಸೆಡಾನ್‌ಗಳಿಗೆ 20,000 ರೂ. ಹಾಗೂ ಎಸ್‌ಯುವಿ ಕಾರುಗಳಿಗೆ 25,000 ರೂಪಾಯಿ ನಿಗದಿ ಮಾಡಲಾಗಿದೆ.