ಕಕ್ಕೇರಾದಲ್ಲಿ ಗುಡ್​ ಪೆಡೇ ಆಚರಣೆ

ಕಕ್ಕೇರಾ ಪಟ್ಟಣದ ಶಾಂತಪುರ ಸಮೀಪದ ಕಲ್ವಾರಿ ಶಿಲುಬೆ ನವನಗರ ಬಂಡೋಳ್ಳಿಯಲ್ಲಿ ಗುಡ್​ ಪ್ರೆಡೇ ಆಚರಿಸಲಾಯಿತು. ಸಭಾಪಾಲಕ ಭಾಸ್ಕರ್​ ಪಾಸ್ಟರ್​, ರವಿಕುಮಾರ, ಡಾ.ಸುಜ್ಞಾನ, ರತ್ನರಾಜ ಶಾಲಿಮನಿ, ಫಿಲಿಫ್​ ದೊಡ್ಮನಿ ಇತರರಿದ್ದರು.
ಕಕ್ಕೇರಾ ಪಟ್ಟಣದ ಶಾಂತಪುರ ಸಮೀಪದ ಕಲ್ವಾರಿ ಶಿಲುಬೆ ನವನಗರ ಬಂಡೋಳ್ಳಿಯಲ್ಲಿ ಗುಡ್​ ಪ್ರೆಡೇ ಆಚರಿಸಲಾಯಿತು. ಸಭಾಪಾಲಕ ಭಾಸ್ಕರ್​ ಪಾಸ್ಟರ್​, ರವಿಕುಮಾರ, ಡಾ.ಸುಜ್ಞಾನ, ರತ್ನರಾಜ ಶಾಲಿಮನಿ, ಫಿಲಿಫ್​ ದೊಡ್ಮನಿ ಇತರರಿದ್ದರು.
Published on
ಕಕ್ಕೇರಾ: ಪಟ್ಟಣದ ಬಳಿಯ ಶಾಂತಪೂರನ ಚರ್ಚ್​ನ ಏಸುಕ್ರಿಸ್ತನ ಬಂಧುಗಳು ಬಂಡೋಳ್ಳಿಯ ಕಲ್ವಾರಿ ಶಿಲುಬೆಯಲ್ಲಿ ಶುಕ್ರವಾರ ಗುಡ್​ ಪೆಡೇ ಆಚರಿಸಲಾಯಿತು.
ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಂತಪೂರ ಗ್ರಾಮದ ಮಾನಪ್ಪ ದೊಡ್ಡಮನಿ ಅವರಿಗೆ ಇಮ್ಯಾನುವೇಲ್​ ಟ್ರಸ್ಟ್​ ಶೈಕ್ಷಣಿಕ ಮತ್ತು ಸಾಂಸತಿಕ ವೈದ್ಯಕಿಯ ಟ್ರಸ್ಟ್​ ವತಿಯಿಂದ ಅಧ್ಯಕ್ಷ ಡಾ.ಸುಜ್ಞಾನ ಅವರು ಮಾನಪ್ಪ ಕಟ್ಟಿಮನಿ ಸಹೋದರ ರಾಜಣ್ಣ ದೊಡ್ಡಮನಿ ಅವರಿಗೆ 10 ಸಾವಿರ ರೂ. ಚೆಕ್​ ನೀಡಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದರು.
ಸಭಾ ಪಾಲಕರಾದ ಭಾಸ್ಕರ್​ ಪಾಸ್ಟರ್​ ಮಾತನಾಡಿ, ಯೇಸುಕ್ರಿಸ್ತ ಶಿಲುಬೆ ಮೇಲೆ ಹೇಳಿದ ಏಳು ಮಾತು ಅದ್ಭುತವಾಗಿ ಹೇಳಿ ಸರ್ವರೂ ಆಚರಿಸುವಂತೆ ಎಲ್ಲರಿಗೂ ಶುಭವಾಗಲಿದೆ ಎಂದರು.
ದೇಶದ ಅನ್ನದಾತ, ದೇಶದ ಯೋಧರು, ರಾಜಕಾರಣಿಗಳು ಸರ್ವರಿಗೂ ಶುಭವಾಗಲಿ, ಕಾನೂನು ಸುವ್ಯವಸ್ಥೆಯಿಂದ ಸರ್ವರಿಗೂ ಶುಭವಾಗಲಿ, ಸರಿಯಾದ ಕಾಲಕ್ಕೆ ಮಳೆ, ಬೆಳೆಗಳಾಗಲಿ ಹಾಗೂ ಇರಾನ್​ ರಾಷ್ಟ್ರದ ಮೇಲೆ ಯುದ್ಧ ಸಾರಿರುವ ಅಮೆರಿಕ ಮತ್ತು ಇಸ್ರೇಲ್​ ರಾಷ್ಟ್ರಗಳು ಬೇಗ ಯುದ್ಧ ನಿಲ್ಲಿಸಲಿ ಎಂದು ಪ್ರಾರ್ಥಿಸಿದರು.
ಡಾ.ಸುಜ್ಞಾನ, ರವಿಕುಮಾರ ಎಸ್​.ಎಸ್​, ಬಾಲರಾಜ ಕೌಳೂರು, ಮೇರಿ ಸಿಸ್ಟರ್​, ರತ್ನರಾಜ ಶಾಲಿಮನಿ, ಫಿಲಿಫ್​ ದೊಡ್ಮನಿ, ಸುವರ್ಣಾ ಸಿಸ್ಟರ್​, ಮೈಕಲ್​ ಸಂಪತ್​, ಶೀಭಾರಾಣಿ, ಶಾಂತಮ್ಮ ಸುರಪುರ ಸೇರಿದಂತೆ ಇತರರು ದೇವರ ವಾಕ್ಯ ಸಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net