ಕಲಬುರಗಿ ಡಾ.ಬುಜುರ್ಕೆ ಅಕಾಡೆಮಿಯಲ್ಲಿ ತರಬೇತಿ ಪಡೆದು ಬಿಎಸ್ಸಿ ಕೃಷಿ ಸಂಬಂಧಿತ ಕೋರ್ಸ್ಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇತ್ತೀಚಿಗೆ ಸತ್ಕರಿಸಲಾಯಿತು. ಹಣಮಂತರಾವ ಭೈರಾಮಡಗಿ, ಶಿವರಾಜ ಬುಜುರ್ಕೆ, ನಿರ್ಮಲಾ ಬುಜುರ್ಕೆ, ಸಿ.ಬಿ.ಹಿರೇಮಠ್, ಅನಂತ ಚೈತನ್ಯ, ಸುಷ್ಮಾ, ಸಂಗಣ್ಣ ಸತ್ಯಂಪೇಟೆ, ಮಲ್ಲಿಕಾರ್ಜುನ ಬಿರಾದಾರ್ ಇತರರಿದ್ದರು.
ಕಲಬುರಗಿ: ಬಿಎಸ್ಸಿ ಕೃಷಿ ಸಂಬಂಧಿತ ಕೋರ್ಸ್ಗಳಿಗೆ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ಈ ಕೋರ್ಸ್ ನತ್ತ ಆಸಕ್ತಿ ವಹಿಸುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಣಾ ಆಯೋಗದ ನೂತನ ಅಧ್ಯ ಸಂತೋಷಕುಮಾರ ಪಾಟೀಲ್ ಹೇಳಿದರು.
ನಗರದ ಸಂಗಮೇಶ್ವರ ಕಾಲನಿಯ ಪಂಚಮುಖಿ ಹನುಮಾನ್ ಮಂದಿರ ಬಳಿಯ ರಾವೇಂದ್ರ ವಿದ್ಯಾಲಯದಲ್ಲಿ ಡಾ.ಬುಜುರ್ಕೆ ಅಕಾಡೆಮಿಯಲ್ಲಿ ತರಬೇತಿ ಪಡೆದು ಬಿಎಸ್ಸಿ ಕೃಷಿ ಸಂಬಂಧಿತ ಕೊರ್ಸ್ಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇತ್ತೀಚಿಗೆ ಸತ್ಕರಿಸಿ ಮಾತನಾಡಿದರು.
ಬಿಎಸ್ಸಿ ಕೃಷಿ ಪದವಿ ಮಾಡಿದ ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀೆ ಅದರಲ್ಲೂ ಕೇಂದ್ರ ಲೋಕಸೇವಾ ಆಯೋಗದ ಪರೀೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಬಿಎಸ್ಸಿ ಕೃಷಿ ಪದವಿ ಪಡೆದವರು ಎಐಎಸ್, ಐಪಿಎಸ್ ಹಾಗೂ ಐಎಫ್ಎಸ್ ನಂತಹ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪದವಿ ಪಡೆದರೆ ಸಾಧನೆ ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿ, ಕೃಷಿ (ಒಕ್ಕಲುತನ) ಇಂದು ಸಂಕಷ್ಟದಲ್ಲಿದೆ. ಹೀಗಾಗಿ ಬಿಎಸ್ಸಿ ಕೃಷಿ ಪದವಿ ಪಡೆಯುವ ವಿದ್ಯಾರ್ಥಿಗಳು ಕೃಷಿ ಅಧಿಕಾರಿಯಾಗಬೇಕು ಎಂಬ ಏಕೈಕ ಧ್ಯೇಯ ಹೊಂದಿರದೇ ಕೃಷಿ ೇತ್ರದ ಬಲವರ್ಧನೆ ಕೈಜೋಡಿಸುವ ಪಣ ತೊಡಬೇಕು ಎಂದರು.
ಅಕಾಡೆಮಿ ನಿರ್ದೇಶಕ ಡಾ.ಶಿವರಾಜ ಬುಜುರ್ಕೆ ಮಾತನಾಡಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡು, ತಮಗೆ ಬಿಎಸ್ಸಿ ಕೃಷಿ ಪದವಿಯಲ್ಲಿ ರೈತರ ಕೋಟಾ ಇರಲಿದೆ. ಪರೀೆ ಬಗ್ಗೆ ತಮಗೆ ಮಾಹಿತಿಯೇ ಇರಲಿಲ್ಲ. ಆದರೆ ಡಾ.ಬುಜುರ್ಕೆ ಅಕಾಡೆಮಿಯ ಡಾ.ಶಿವರಾಜ ಪಾಟೀಲ್ ಅವರು ಉತ್ತಮ ತರಬೇತಿ ನೀಡಿ ಕೃಷಿ ಪದವಿಗೆ ಪ್ರವೇಶ ದೊರೆಯುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ಅಕಾಡೆಮಿಯ ಕಾರ್ಯದರ್ಶಿ ನಿರ್ಮಲಾ ಶಿವರಾಜ ಬುಜುರ್ಕೆ, ಪ್ರಮುಖರಾದ ಸಿ.ಬಿ.ಹಿರೇಮಠ್, ಅನಂತ ಚೈತನ್ಯ ಬಜುರ್ಕೆ, ಸುಷ್ಮಾ, ಸಂಗಣ್ಣ ಸತ್ಯಂಪೇಟೆ, ಮಲ್ಲಿಕಾರ್ಜುನ ಬಿರಾದಾರ್ ಸೇರಿ ಇತರರಿದ್ದರು.
"
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರಮುಖವಾಗಿ ಅಗ್ರಿಕಲ್ಚರ್, ವೆರ್ಟನರಿ ವಿಭಾಗದಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆದಿರುವುದು ಸಂತಸದ ಸಂಗತಿ. ಕಳೆದ ಹತ್ತು ವರ್ಷಗಳಿಂದ ಅಕಾಡೆಮಿ ತರಬೇತಿ ನೀಡುತ್ತಿದೆ.