ವ್ಯಾಜ್ಯಗಳ ಇತ್ಯರ್ಥಕ್ಕೆ ಸುವರ್ಣಾವಕಾಶ

ಶ್ರೀನಿವಾಸ ನವಲೆ
ಶ್ರೀನಿವಾಸ ನವಲೆ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಲೋಕ ಅದಾಲತ್​ ಜು.11ರಂದು
ಕಲಬುರಗಿ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್​ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ತಿಳಿಸಿದ್ದಾರೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಕದಾರರಿಗೆ ಉತ್ತಮ ಅವಕಾಶವಾಗಿದೆ. ಅದಾಲತ್​ನಲ್ಲಿ ಸಿವಿಲ್​ ವ್ಯಾಜ್ಯ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್​ ಪ್ರಕರಣ, ಬ್ಯಾಂಕ್​ ಸಾಲ ವಸೂಲಾತಿ, ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ಹಾಗೂ ಕೌಟುಂಬಿಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಜತೆಗೆ, ಚೆಕ್​ ಬೌನ್ಸ್​ ಪ್ರಕರಣಗಳಿಗಾಗಿಯೇ ಜುಲೈ 18 ರಂದು ವಿಶೇಷ ಲೋಕ ಅದಾಲತ್​ ಆಯೋಜಿಸಲಾಗಿದೆ.
ಲೋಕ ಅದಾಲತ್​ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ಪೂರ್ಣ ಹಿಂದಿರುಗಿಸಲಾಗುವುದು. ಇಲ್ಲಿನ ತೀರ್ಪು ನ್ಯಾಯಾಲಯದ ಆದೇಶದಷ್ಟೇ ಪರಿಣಾಮಕಾರಿಯಾಗಿದ್ದು, ಇದರ ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಿ, ಉಭಯ ಪಕ್ಷಗಳ ನಡುವೆ ಸೌಹಾರ್ದತೆ ಉಳಿಯುತ್ತದೆ. ಕದಾರರು ಖುದ್ದಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಬೇರೆ ಊರುಗಳಲ್ಲಿದ್ದರೆ ಆನ್​ಲೈನ್​ ಮೂಲಕವೂ ಭಾಗವಹಿಸಲು ಅವಕಾಶವಿದೆ.
ಕಳೆದ ಮಾರ್ಚ್​ನಲ್ಲಿ ನಡೆದ ಅದಾಲತ್​ನಲ್ಲಿ ಸಾಕಷ್ಟು ಪ್ರಕರಣ ಯಶಸ್ವಿಯಾಗಿ ಇತ್ಯರ್ಥವಾಗಿದ್ದು, ಈ ಬಾರಿಯೂ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾ ತಾಲೂಕಿನ ಕಾನೂನು ಸೇವಾ ಸಮಿತಿ ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net