ನಾವು ಮಾಡುವ ಪ್ರತಿ ತಪ್ಪಿಗೂ ದೈವದ ಶಿಕ್ಷೆ

ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಿದರು.
ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸತ್ಯಾತ್ಮ ತೀರ್ಥರು ಎಚ್ಚರಿಕೆ
  • ಸರ್ವಜ್ಞ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ
ಕಲಬುರಗಿ: ವಿದ್ಯಾರ್ಥಿಗಳು ಕೇವಲ ಅಂಕಗಳಿಸುವುದಕ್ಕಾಗಿ ಅಧ್ಯಯನ ಮಾಡದೆ, ಜೀವನದಲ್ಲಿ ಧರ್ಮ, ನ್ಯಾಯ ಮತ್ತು ನೀತಿಯನ್ನು ಅಳವಡಿಸಿಕೊಳ್ಳಬೇಕು. ಪರಮಾತ್ಮನು ಸರ್ವನಾಗಿದ್ದು, ನಮ್ಮ ಪ್ರತಿಯೊಂದು ಕಾರ್ಯವನ್ನು ಗಮನಿಸುತ್ತಿರುತ್ತಾನೆ ಎಂಬ ಎಚ್ಚರ ನಮಗಿರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ನುಡಿದರು.
ಸರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಯುವ ಪೀಳಿಗೆ ಅತೀ ಆಸೆ, ತಾತ್ಕಾಲಿಕ ಸುಖಕ್ಕಾಗಿ ತಪ್ಪು ದಾರಿ ತುಳಿಯಬಾರದು. ನಾವು ಮಾಡುವ ಪ್ರತಿಯೊಂದು ತಪ್ಪಿಗೂ ದೈವದ ಶಿೆ ಖಂಡಿತವಾಗಿ ಇರುತ್ತದೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ನಾಡೋಜ ಶಿವರಾಜ ವಿ. ಪಾಟೀಲ್​ ಅವರ ಮಾರ್ಗದರ್ಶನದಲ್ಲಿ ಸರ್ವ ಸಂಸ್ಥೆಯೂ ಸಂಸ್ಕಾರಭರಿತ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಸಿದರು.
ಮಠಾಧಿಕಾರಿ ಂಟಿ ರಾಮಾಚಾರ್​, ಸರ್ವ ಮತ್ತು ಜಸ್ಟಿಸ್​ ಶಿವರಾಜ ವಿ. ಪಾಟೀಲ್​ ಕಾಲೇಜಿನ ಸಂಸ್ಥಾಪಕ ಪ್ರೊ.ಚನ್ನಾರೆಡ್ಡಿ ಪಾಟೀಲ್​, ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಪ್ರಮುಖರಾದ ವಿನುತಾ ಆರ್​.ಬಿ., ಅನಿತಾ ಕುಲಕರ್ಣಿ, ಪ್ರಭುಗೌಡ ಸಿದ್ದಾರೆಡ್ಡಿ, ಲ್ಮ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು.
"

ಯಾರೂ ಇಲ್ಲದ ಜಾಗದಲ್ಲಿ ಹಣ್ಣು ತಿನ್ನಲು ಗುರುಗಳು ಹೇಳಿದಾಗ, ಎಲ್ಲೆಡೆ ಭಗವಂತನಿದ್ದಾನೆ ಎಂದು ಹಣ್ಣು ತಿನ್ನದ ಕನಕದಾಸರ ಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು. ಸಂಪತ್ತು ಹೋದರೆ ಏನೂ ಹೋದಂತಲ್ಲ, ಆರೋಗ್ಯ ಹೋದರೆ ಸ್ವಲ್ಪ ಹೋದಂತೆ. ಆದರೆ ಚಾರಿತ್ರ$್ಯ ಹೋದರೆ ಎಲ್ಲವನ್ನೂ ಕಳೆದುಕೊಂಡಂತೆ. ವಿದ್ಯೆಯ ಜತೆಗೆ ವಿನಯ ಮತ್ತು ಶುದ್ಧ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು.

> ಶ್ರೀ ಸತ್ಯಾತ್ಮ ತೀರ್ಥರು,

ಉತ್ತರಾದಿ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net