ಎಕರೆಗೆ ಮೂವತ್ತು ಸಾವಿರ ಪರಿಹಾರ ನೀಡಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಪರ ಸಂಟನೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು.  ಕಿಶೋರ ಮಿಠಾರಿ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಶಿವಲಿಂಗ ಚನ್ನಾಪುರ, ರುದ್ರಪ್ಪ ವೀರಾಪುರ, ಪುಂಡಲೀಕ ಕುರಗುಂದ, ಯಲ್ಲಪ್ಪ ಬೆಳಗಾಂಕರ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಪರ ಸಂಟನೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು. ಕಿಶೋರ ಮಿಠಾರಿ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಶಿವಲಿಂಗ ಚನ್ನಾಪುರ, ರುದ್ರಪ್ಪ ವೀರಾಪುರ, ಪುಂಡಲೀಕ ಕುರಗುಂದ, ಯಲ್ಲಪ್ಪ ಬೆಳಗಾಂಕರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಕ್ಕೇರಿ
ರಾಜ್ಯದ ಎಲ್ಲ ಜಿಲ್ಲೆಗಳನ್ನು ಬರಪೀಡಿತ ಎಂದು ೂಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂದ ವತಿಯಿಂದ ಖಾನಾಪುರದಲ್ಲಿ ಗ್ರೇಡ್​&2 ತಹಸೀಲ್ದಾರ್​
ಎಸ್​.ಕೆ.ತಂಗೊಳ್ಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿರುವ ಪರಿಣಾಮ ಬೆಳೆಗಳು ಕುಂಠಿತಗೊಂಡಿವೆ. ಕೆಲವೆಡೆ ಬಿತ್ತನೆಯೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ಕನಿಷ್ಠ 30,000 ರೂ.ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೆಳೆವಿಮೆ ಯೋಜನೆಯಡಿ ಹಾನಿ ಸರಿದೂಗಿಸಬೇಕು. ಮಹದಾಯಿ ಹೋರಾಟಗಾರರು ಹಾಗೂ ಬಿಡದಿ
ಟೌನ್​ಶಿಪ್​ ರೈತ ಹೋರಾಟಗಾರರ ವಿರುದ್ಧ ಹಾಕಿರುವ ಸುಳ್ಳು ಕೇಸ್​ ಕೂಡಲೇ ಹಿಂಪಡೆಯಬೇಕು. ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಬೇಕು. ಜತೆಗೆ ವಿವಿಧ ಬೇಡಿಕೆ ಈಡೇರಿಕೆಗೆ ಶ್ರೀವೇ ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಖಿಲ ಕರ್ನಾಟಕ ರೈತ ಸಂದ ಉಪಾಧ್ಯಕ್ಷ ಕಿಶೋರ ಮಿಠಾರಿ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಶಿವಲಿಂಗ ಚನ್ನಾಪುರ, ರುದ್ರಪ್ಪ ವೀರಾಪುರ, ಪುಂಡಲೀಕ ಕುರಗುಂದ, ಯಲ್ಲಪ್ಪ ಬೆಳಗಾಂಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net