ಕ್ರೀಡಾಂಗಣದ ಸೌಲಭ್ಯ ಪಡೆದುಕೊಳ್ಳಿ

ಶಹಾಪುರ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ, ಲಾಂಗ್​ ಟೆನಿಸ್​ ಗ್ರೌಂಡ್​ ಕಾಮಗಾರಿ ಪರಿಶೀಲಿಸಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತ ಚಂದಾಪುರ, ಅವಿನಾಶ ಸಿನ್ನೂರ ಇತರರಿದ್ದರು.
ಶಹಾಪುರ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ, ಲಾಂಗ್​ ಟೆನಿಸ್​ ಗ್ರೌಂಡ್​ ಕಾಮಗಾರಿ ಪರಿಶೀಲಿಸಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತ ಚಂದಾಪುರ, ಅವಿನಾಶ ಸಿನ್ನೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ದರ್ಶನಾಪುರ ಸಲಹೆ
  • ಶಹಾಪುರದಲ್ಲಿ ವಿವಿಧ ಕಾಮಗಾರಿ ಪರಿಶೀಲನೆ
ಶಹಾಪುರ: ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿರುವಂತೆ ವಿವಿಧ ಕ್ರೀಡೆಗಳಿಗೆ, ಶಾರೀರಿಕ, ಕವಾಯತುಗಳಿಗೆ ಬೇಕಾಗುವ ಸಕಲ ಸೌಲಭ್ಯವುಳ್ಳ ಕ್ರೀಡಾ ಸಾಮಗ್ರಿಯನ್ನು ಕಲ್ಪಿಸಲಾಗಿದು,್ದ ಹಿರಿಯರು, ಯುವಕರು ಮತ್ತು ಬಾಲಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಕೆಕೆಆರ್​ಡಿಬಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಲಭ್ಯಗಳು, ಲಾಂಗ್​ ಟೆನಿಸ್​ ಗ್ರೌಂಡ್​ ನಿರ್ಮಾಣದ ಕಾಮಗಾರಿ ಪರಿಶೀಲಿಸಿ, ನಂತರ ಮಾತನಾಡಿದ ಅವರು, ಹೊರ ಕ್ರೀಡಾಂಗಣದೊಳಗೆ 1ಕೋಟಿ ರೂ ವೆಚ್ಚದಲ್ಲಿ ನೀರು ನಿಲ್ಲದಂತೆ ಇನ್ನರ್​ ಡ್ರೈನೇಜ್​ ನಿರ್ಮಾಣ ಮಾಡಲಾಗುತ್ತಿದ್ದು, ಅದರ ಜತೆಗೆ ಹಿರಿಯರಿಗೆ ವಾಯು ವಿಹಾರಕ್ಕೆ ಟ್ರಾ$್ಯಕಿಂಗ್​ ವ್ಯವಸ್ಥೆ, ಕ್ರೀಡಾಂಗಣ ಸುತ್ತಲೂ ಗೋಡೆಗಳ ಭದ್ರತೆಗೆ ವ್ಯವಸ್ಥಿತ ಪಿಚ್ಚಿಂಗ್​ ಮಾಡಲಾಗಿದೆ ಎಂದರು. ಕ್ರೀಡಾಂಗಣದ ರಕ್ಷಣೆಯ ಕಾಳಜಿಯು ಬಹು ಮುಖ್ಯವಾಗಿದೆ. ಕ್ರೀಡಾಸಕ್ತರು, ಹಿರಿಯರು ಸದಾ ಕ್ರೀಡಾಂಗಣದ ಬಗ್ಗೆ ಕಾಳಜಿ ವಹಿಸುತ್ತಿರಬೇಕು ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಉಳಿದ ಕೆಲಸ ಕಾರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತ ಚಂದಾಪುರ, ಅವಿನಾಶ ಸಿನ್ನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net