ಅದ್ದೂರಿ ಸ್ವಾತಂತ್ರ್ಯ ದಿನಕ್ಕೆ ಸಿದ್ಧತೆ ಮಾಡಿಕೊಳ್ಳಿ

ಚಿತ್ತಾಪುರ ತಹಸಿಲ್​ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡ ಪೂರ್ವಸಿದ್ಧತೆ ಸಭೆಯಲ್ಲಿ ತಹಸೀಲ್ದಾರ್​ ನಾಗಯ್ಯ ಹಿರೇಮಠ ಮಾತನಾಡಿದರು. ರಾಜಕುಮಾರ ಮರತೂರಕರ್​, ಮಹ್ಮದ್​ ಅಕ್ರಂ ಪಾಶಾ ಇತರರಿದ್ದರು.
ಚಿತ್ತಾಪುರ ತಹಸಿಲ್​ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡ ಪೂರ್ವಸಿದ್ಧತೆ ಸಭೆಯಲ್ಲಿ ತಹಸೀಲ್ದಾರ್​ ನಾಗಯ್ಯ ಹಿರೇಮಠ ಮಾತನಾಡಿದರು. ರಾಜಕುಮಾರ ಮರತೂರಕರ್​, ಮಹ್ಮದ್​ ಅಕ್ರಂ ಪಾಶಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ನಾಗಯ್ಯ ಹಿರೇಮಠ ಸೂಚನೆ
  • ತಹಸಿಲ್​ ಕಚೇರಿಯಲ್ಲಿ ಪೂರ್ವಸಿದ್ಧತೆ ಸಭೆ
ಚಿತ್ತಾಪುರ: ತಾಲೂಕಿನಲ್ಲಿ ಅದ್ದೂರಿ ಹಾಗೂ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಸೂಚನೆ ನೀಡಿದರು.
ತಹಸಿಲ್​ ಕಚೇರಿಯಲ್ಲಿ ಸ್ವಾತಂತ್ರ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ತಹಸಿಲ್​ ಸೇರಿ ಅನೇಕ ಕಡೆ ಸ್ವಚ್ಛತೆ ಕೈಗೊಳ್ಳಬೇಕು. ತಾಲೂಕು ಮಟ್ಟದ ಎಲ್ಲ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು. ಬೆಳಗ್ಗೆ 8ಕ್ಕೆ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಬೆಳಗ್ಗೆ 9ಕ್ಕೆ ತಹಸಿಲ್​ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ಕಾರಿ ಶಾಲೆಗಳಲ್ಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ನೀಟ್​ ರ್ಯಾಂಕ್​ ಮಕ್ಕಳು ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಗುವುದು. ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಾಕೀತು ಮಾಡಿದರು.
ಗ್ರೇಡ್​-2 ತಹಸೀಲ್ದಾರ್​ ರಾಜಕುಮಾರ ಮರತೂರಕರ, ತಾಪಂ ಇಒ ಮಹ್ಮದ್​ ಅಕ್ರಂ ಪಾಶಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅಧಿಕಾರಿಗಳಾದ ಡಾ.ಶಂಕರ ಕಣ್ಣಿ, ವಿಜಯಕುಮಾರ ಬಡಿಗೇರ, ಶಶಿಧರ ಬಿರಾದಾರ, ಚೇತನ ಗುರಿಕಾರ, ಸುನೀತಾ, ವಿಠ್ಠಲರಾವ, ಸೈಯದ್​ ಅನ್ವರ್​, ಸತೀಶಕುಮಾರ, ಮಲ್ಲಿಕಾರ್ಜುನ ಮಾಲಿಪಾಟೀಲ್​, ಸೂರ್ಯಕಾಂತ, ಎಂಡಿ ಜಾವೀದ್​, ವಿಠ್ಠಲ ಬಿರಾದಾರ, ಸಂತೋಷ, ವಿಠ್ಠಲ್​, ಕರಣಕುಮಾರ, ಉಮೇಶ, ನರಸಿಂಹಲು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net