ಜಿಲ್ಲೆಯಲ್ಲಿ 11,634 ಮೆಟ್ರಿಕ್ ಟನ್ ಯೂರಿಯಾ, 9,583 ಮೆಟ್ರಿಕ್ ಟನ್ ಡಿ.ಎ.ಪಿ, ಕಾಂಪ್ಲೆಕ್ಸ್ -13,990 ಮೆ.ಟನ್ ಸೇರಿದಂತೆ 38,351 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಈಗಾಗಲೆ ಇದರಲ್ಲಿ ಒಟ್ಟಾರೆ 5-6 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ. ಇನ್ನು ಮಳೆಯಾಗಿಲ್ಲ, ಈಗಲೆ ಬಿತ್ತನೆ ಮಾಡುವುದು ಸರಿಯಲ್ಲ. ರೈತರಿಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಯಾವುದೇ ಕೊರತೆ ಇಲ್ಲ. ತಹಶೀಲ್ದಾರರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತಾಪಿ ಜನರಿಗೆ ಅರಿವು ಮೂಡಿಸಬೇಕು ಎಂದರು.