ಬೆಳೆ ವಿಮೆ ಮಾಡಿಸಿಕೊಳ್ಳಿ

ಹಾರೋಹಳ್ಳಿ ತಾಲೂಕಿನ ಕಾಡು ಜಕ್ಕಸಂದ್ರ ಗ್ರಾಮದಲ್ಲಿ ಸಚಿವ ಎಚ್.ಸಿ ಬಾಲಕೃಷ್ಣರವರು ರೈತರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿದರು. ಎಸ್ ರವಿ, ಜೆಸಿಬಿ ಅಶೋಕ್, ಈಶ್ವರ್ ಇತರರು ಇದ್ದರು.
ಹಾರೋಹಳ್ಳಿ ತಾಲೂಕಿನ ಕಾಡು ಜಕ್ಕಸಂದ್ರ ಗ್ರಾಮದಲ್ಲಿ ಸಚಿವ ಎಚ್.ಸಿ ಬಾಲಕೃಷ್ಣರವರು ರೈತರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿದರು. ಎಸ್ ರವಿ, ಜೆಸಿಬಿ ಅಶೋಕ್, ಈಶ್ವರ್ ಇತರರು ಇದ್ದರು.
Published on

ಹಾರೋಹಳ್ಳಿ :

ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಸಚಿವ ಎಚ್. ಸಿ ಬಾಲಕೃಷ್ಣ ತಿಳಿಸಿದರು.

ತಾಲೂಕಿನ ತಟ್ಟೆಕೆರೆ, ಕಾಡು ಜಕ್ಕಸಂದ್ರ ಗ್ರಾಮದ ಜಮೀನಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಮಾತನಾಡಿ, ಸರ್ಕಾರ ರೈತರಿಗೆ ಹಲವು ಯೋಜನೆ ಜಾರಿಗೆ ತಂದಿದೆ. ಅದನ್ನು ಸಾರ್ವಜನಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
90 ದಿನದಲ್ಲಿ ಹೆಚ್ಚು ಬೆಳೆ ಬೆಳೆಯುವ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಿದ್ದು, ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಉತ್ತಮ ಮಾರ್ಗದರ್ಶನ ನೀಡಬೇಕು. ಕೃಷಿಕರಿಗೆ ಮಾಹಿತಿ ನೀಡದೆ ಕಾಲಹರಣ ಮಾಡಿದರೆ, ಸರಿಯಾಗಿ ಸ್ಪಂಧಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವುದರ ಮೂಲಕ ಆಗುವ ಬೆಳೆ ಹಾನಿ ತಪ್ಪಿಸಬಹುದಾಗಿದೆ. ವಿಮೆ ಮಾಡಿಸಿದರೆ ಬರಗಾಲದ ಸಂದರ್ಭದಲ್ಲಿ ನಿಮಗೆ ಅನುಕೂಲವಾಗಲಿದೆ 400 ರೂ. ಪಾವತಿ ಮಾಡಿ ವಿಮೆ ಮಾಡಿಸಿ ಬೆಳೆಯ ರಕ್ಷಣೆ ಮಾಡಿಕೊಳ್ಳಿ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರೇಷ್ಮೆ ನಿಗಮದ ಅಧ್ಯಕ್ಷ ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್, ತಹಸೀಲ್ದಾರ್ ಹರ್ಷವರ್ಧನ್, ತಾಪಂ ಇಒ ಅಪೂರ್ವ, ಇನ್‌ಸ್ಪೆಕ್ಟರ್ ಮಲ್ಲೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ್, ಮುಖಂಡರಾದ ಈಶ್ವರ್, ಹರೀಶ್ ಕುಮಾರ್, ಮೋಹನ್ ಹೊಳ್ಳ, ಶಂಕರ್, ಬಾಲಾಜಿ, ಶಿವಕುಮಾರ್ ಮೂರ್ತಿ, ರಾಂಪುರರುದ್ರ, ರುದ್ರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net