ಇನ್ನೂ ಜತೆಗಿದ್ದ ಜಿಪಂ ಸಿಇಒ ಅವರನ್ನು ಉದ್ದೇಶಿಸಿ ಹೇಳಿದ ಶಾಸಕರು, ಗ್ರಾಪಂ ಪಿಡಿಒಗಳು ಪಂಚಾಯಿತಿಗೆ ಬರುವುದಿಲ್ಲ. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೂರೆಂಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಬೇಕಾದ ಸ್ಥಳಿಯ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಕುಡಿಯುವ ನೀರು, ಕರೆಂಟ್, ಚರಂಡಿ ಸ್ವಚ್ಛಗೊಳಿಸುವಿಕೆ ಸೇರಿ ಅನೇಕ ಸಮಸ್ಯೆಗಳಿದ್ದರೂ ಅವರು ಕೇರ್ ಮಾಡುತ್ತಿಲ್ಲ, ಕಾರಣ ತಾವು ಈ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ಮಾಡುವ ಮೂಲಕ ಜನರಿಗೆ ಸ್ಪಂದಿಸಬೇಕು. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದರೆ ನೇರವಾಗಿ ನಮಗೆ ಜನರಿಂದ ಪೊನ್ ಬರುತ್ತಿವೆ. ನಾವು ಸಹ ಅವರಿಗೆ ಹೇಳಿದರೆ ಸಕಾಲಕ್ಕೆ ಸ್ಪಂದನೆ ಮಾಡುವುದಿಲ್ಲ. ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ ಸಮಸ್ಯೆನೇ ಇರುತ್ತಿರಲಿಲ್ಲ ಎಂದು ಶಾಸಕರು ಸಮಸ್ಯೆಗಳನ್ನು ಈ ಇಬ್ಬರು ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. ಶಾಸಕರ ಪ್ರಶ್ನೆ ಮತ್ತು ಬೇಡಿಕೆಗಳನ್ನು ಶಾಂತವಾಗಿ ಆಲಿಸಿದ ಸಿಇಒ ಲವೀಶ್ ಒರ್ಡಿಯಾ ಅವರು ಆದಷ್ಟು ಬೇಗನೆ ಎಲ್ಲವೂ ಸರಿಮಾಡುವುದಾಗಿ ಹೇಳಿದರು.