ಗಾಣಿಗ ಸಮುದಾಯ ಮಾದರಿಯಾಗಲಿ

ಬೈಲಹೊಂಗಲ ನಗರದಲ್ಲಿ ಹಮ್ಮಿಕೊಂಡಿದ್ದ ಗಾಣದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಡಾ.ವೀರಯ್ಯ ಹಿರೇಮಠ, ಗಂಗಾಧರ ಗಿರಿಜಣ್ಣವರ, ಗೌರವ್ವ ಗಾಣಿಗೇರ, ರಾಜು ಜನ್ಮಟ್ಟಿ, ಬಾಬು ಕುಡಸೋಮನ್ನವರ, ಮಹಾಂತೇಶ ಕಳ್ಳಿಬಡ್ಡಿ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಹಮ್ಮಿಕೊಂಡಿದ್ದ ಗಾಣದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಡಾ.ವೀರಯ್ಯ ಹಿರೇಮಠ, ಗಂಗಾಧರ ಗಿರಿಜಣ್ಣವರ, ಗೌರವ್ವ ಗಾಣಿಗೇರ, ರಾಜು ಜನ್ಮಟ್ಟಿ, ಬಾಬು ಕುಡಸೋಮನ್ನವರ, ಮಹಾಂತೇಶ ಕಳ್ಳಿಬಡ್ಡಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮೂಲ ವೃತ್ತಿಗೆ ಧಕ್ಕೆಯಾದಂತೆ ಎಚ್ಚರ ವಹಿಸಿ ಗಾಣಿಗ ಸಮುದಾಯ ಮಾದರಿಯಾಗಬೇಕು ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ಧಾರವಾಡ ರಸ್ತೆಯಲ್ಲಿನ ಶ್ರೀ ಗಾಣದೇವಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಣದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಣಿಗ ಸಮುದಾಯ ತಮ್ಮ ಕಾಯಕದಿಂದ ಕೀರ್ತಿ ಬೆಳಗಿಸಿಕೊಂಡಿದ್ದು, ಸಾಮಾಜಿಕ ಸಂಟಿತರಾಗಿ ಸಾಗಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಟನೆ ಮೂಲಕ ಹಲವಾರು ಸಮಾಜಮುಖಿ ಕಾರ್ಯ ಕೈಗೊಳ್ಳುತ್ತಿರುವ ಕಾರ್ಯ ಶ್ಲಾನೀಯ ಎಂದರು.
ನಿವೃತ್ತ ಶಿಕ್ಷಕ ಸಿ.ವಿ.ಕಟ್ಟಿಮನಿ ಉಪನ್ಯಾಸ ನೀಡಿ, ಬಸವಾದಿ ಶರಣರ ಕಾಲದಿಂದಲೂ ಗಾಣಿಗ ಕಾಯಕಕ್ಕೆ ಸಮಾಜದಲ್ಲಿ ಗೌರವವಿದೆ. ಆಹಾರ ತಯಾರಿಕೆಯಲ್ಲಿ ಎಣ್ಣೆಯ ಪಾತ್ರ ಅವಶ್ಯ. ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕುಲ ಕಸಬು ನಿರ್ವಹಿಸಿದರೆ ಸರ್ಕಾರದ ಯಾವ ಸೌಲಭ್ಯಗಳಿಗೂ ಕೈ ಚಾಚುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ತಿಳಿಸಿದರು.
2025&26ನೇ ಸಾಲಿನ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಭಗಳಾಂಭಾದೇವಿ ದೇವಸ್ಥಾನದ ಧರ್ಮಾ-ಧಿಕಾರಿ ಡಾ.ವೀರಯ್ಯ ಹಿರೇಮಠ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತೇಶಶಾಸ್ತ್ರಿ ಆರಾದ್ರಿಮಠ, ಗಾಣಿಗ ಸಮುದಾಯದ ತಾಲೂಕಾಧ್ಯಕ್ಷ ಗಂಗಾಧರ ಗಿರಿಜಣ್ಣವರ, ಮಹಿಳಾ ಟಕದ ಅಧ್ಯೆ ಗೌರವ್ವ ಗಾಣಿಗೇರ, ಪುರಸಭೆ ಮಾಜಿ ಅಧ್ಯರಾದ ರಾಜು ಜನ್ಮಟ್ಟಿ, ಬಾಬು ಕುಡಸೋಮನ್ನವರ, ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಮಹಾಂತೇಶ ಕಳ್ಳಿಬಡ್ಡಿ, ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ, ಗಾಣಿಗ ನೌಕರರ ಸಂದ ಅಧ್ಯಕ್ಷ ಆರ್​.ಜಿ.ಪಾಟೀಲ, ಜಿಲ್ಲಾಧ್ಯ ರಮೇಶ ಉಟಗಿ, ಟಿಎಚ್​ಒ ಡಾ.ರವಿಂದ್ರ ಜಕನೂರ, ಡಾ.ಮಲ್ಲಪ್ಪ ಸಜ್ಜನ, ಅರ್ಬನ್​ ಬ್ಯಾಂಕ್​ ನಿರ್ದೇಶಕ ಬಾಬಣ್ಣ ಪತ್ತೆಣ್ಣವರ, ಶಂಕರ ಗಾಣಿಗೇರ, ಅಶೋಕ ಗುಲಗಂಜಿ, ಮಲ್ಲಿಕಾರ್ಜುನ ಗಾಣಿಗಿ, ಪ್ರಕಾಶ ಗಾಣಿಗೇರ, ಮಲ್ಲಿಕಾರ್ಜುನ ಗಾಣಿಗೇರ ಇತರರಿದ್ದರು. ಸೋಮಲಿಂಗ ಮೆಟಗಟ್ಟಿ ಸ್ವಾಗತಿಸಿದರು. ಪ್ರವಿಣ ಗಾಣಿಗೇರ ನಿರೂಪಿಸಿದರು. ಯಲ್ಲಪ್ಪ ಗಾಣಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net