ಹಿರೇನಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಿಜಯವಾಣಿ ವಿದ್ಯಾರ್ಥಿ&ಉದ್ಯೋಗ ಮಿತ್ರ ಸಂಚಿಕೆ ವಿತರಿಸಲಾಯಿತು. ಮಹಾದೇವ ಜಟ್ಟೆಪ್ಪನವರ, ಎಸ್.ಎ.ಕೇರಿ, ವೈ.ಆರ್.ಹವಳಪ್ಪನವರ, ಆರ್.ಬಿ.ಹೂನೂರ, ಎಂ.ಐ.ಗಾಣಿಗೇರ ಇತರರಿದ್ದರು.
ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ನಾಡಿನ ನಂ.1 ದಿನಪತ್ರಿಕೆ ವಿಜಯವಾಣಿ ವಿದ್ಯಾರ್ಥಿ&ಉದ್ಯೋಗ ಮಿತ್ರ ಸಂಚಿಕೆ ಉಪಯುಕ್ತವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮಹಾದೇವ ಜಟ್ಟೆಪ್ಪನವರ ಹೇಳಿದರು.
ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ&ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಠ್ಯದ ಜತೆಗೆ ನಿರಂತರವಾಗಿ ವಿದ್ಯಾರ್ಥಿ&ಉದ್ಯೋಗ ಮಿತ್ರ ಪತ್ರಿಕೆ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ವೃದ್ಧಿಯಲ್ಲಿ ಪತ್ರಿಕೆ ಸಹಾಯಕ ವಾಗಿದೆ. ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ ಎಸ್.ಎ.ಕೇರಿ ಮಾತನಾಡಿ, ಅಧ್ಯಯನಕ್ಕೆ ಸಂಬಂಧಿತ ಮಹತ್ವದ ಅಂಶ, ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀೆಗಳ ಕುರಿತಾದ ಪೂರಕ ಮಾರ್ಗದರ್ಶನ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಮಾಹಿತಿ ಓದಗಿಸುವ ವಿದ್ಯಾರ್ಥಿ ಉದ್ಯೋಗ ಮಿತ್ರ ವಿದ್ಯಾರ್ಥಿಗಳ ಬದುಕು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು ತಿಳಿಸಿದರು.
ಶಿಕರಾದ ವೈ.ಆರ್.ಹವಳಪ್ಪನವರ,
ಆರ್.ಬಿ.ಹೂನೂರ, ಎಂ.ಐ.ಗಾಣಿಗೇರ, ಎಚ್.ಎಸ್.ಇಜಾರದಾರ, ವರದಿಗಾರ ಸಂಗಮೇಶ ಅಂಗಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.