ಆಳಂದ: ಬಟ್ಟರಗಾದಲ್ಲಿ ಹಜರತ್ ಸೈಯದ್ ಹುಸೇನಿ ಶಾಹವಲಿ ಉರ್ಫ್ ಮೌಲಾ ಅಲಿ ಅವರ 137ನೇ ಉರುಸ್ ಏ.7ರಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ದರ್ಗಾದ ನಬಿಲಾಲ್ ಲದಾಫ್ ತಿಳಿಸಿದ್ದಾರೆ. ಧಂಗಾಪುರದ ಮಾಜಿ ಶಾಸಕ ಶರಣಬಸಪ್ಪ ಪಾಟೀಲ್ ಅವರ ಮನೆಯಿಂದ ಏ.7ರಂದು ರಾತ್ರಿ 9ಕ್ಕೆ ಗಂಧದ ಮೆರವಣಿಗೆ ಶುರುವಾಗಿ ಬಟ್ಟರಗಾದ ಸಾಹೇಬರ ಮನೆ ತಲುಪಲಿದೆ. ಬಳಿಕ ಮನೆಯಿಂದ ದರ್ಗಾದವರೆಗೂ ಅದ್ದೂರಿ ಮೆರವಣಿಗೆ ಮೂಲಕ ಏ.8ರಂದು ಬೆಳಗ್ಗೆ 4ಕ್ಕೆ ದರ್ಗಾ ತಲುಪಿ ಪೀಠಾಧಿಪತಿ ಹಜರತ್ ಸೈಯದ್ ಬಾಷಾ ಸಾಹೇಬ್ ಉರ್ಫ್ ಖತುಬಿ ಹುಸೇನಿ ಸಜ್ಜಾದ್ ನಶೀನ್ ಮುತವಲಿ ಅವರ ನೇತೃತ್ವದಲ್ಲಿ ಲೇಪನ ಕಾರ್ಯ ನಡೆಯಲಿದೆ. ರಾತ್ರಿಯಿಡೀ ದೀಪ ಬೆಳಗುವ ಕಾರ್ಯಕ್ರಮ ಜರುಗುವುದು. ಏ.9ರಂದು ಸಂಜೆ 4ಕ್ಕೆ ಕುಸ್ತಿ ಕಾರ್ಯಕ್ರಮ ನಡೆಯಲಿವೆ. ಖವ್ವಾಲಿ, ಗೀಗೀ ಪದ ಹಾಗೂ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರಗುವವು ಎಂದು ಮಾಹಿತಿ ನೀಡಿದ್ದಾರೆ.