ಮಾವು ಬೆಳೆಗಾರರೊಂದಿಗೆ ‘ಬುಕ್ ನೌ ಪೇ ಲೇಟರ್’ ಒಪ್ಪಂದದಡಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವ ಜತೆಗೆ ಗ್ರಾಹಕರಿಗೆ ತಾಜಾ ಮಾವಿನ ಹಣ್ಣು ಖರೀದಿಸಲು ಸಹಾಯವಾಗಲಿದೆ. ರೈತರು ಬಾಕ್ಸ್ನಲ್ಲಿ ತಲಾ 3 ಕೆಜಿ ಮಾವಿನ ಹಣ್ಣು ಪ್ಯಾಕ್ ಮಾಡುತ್ತಾರೆ. ಇದನ್ನು ಅದೇದಿನ ಅಥವಾ ಮರುದಿನದಂದು ಬುಕಿಂಗ್ ಮಾಡಿರುವ ಗ್ರಾಹಕರಿಗೆ ವಿತರಿಸಲಾಗುವುದು. ಬೆಂಗಳೂರು ನಗರ ಸೇರಿ ದೇಶದ ಆಯ್ದ ಸ್ಥಳಗಳಿಗೆ 24 ಗಂಟೆಯಲ್ಲಿ ಸ್ವೀಡ್ ಸೇವೆಯಡಿ ಹಣ್ಣ ವಿತರಿಸುವ ಸೌಲಭ್ಯವಿದೆ. 2019ರ ಮಾರ್ಚ್ನಿಂದ 2025ರ ಜೂನ್ವರೆಗೆ 3,81,183 ಕೆಜಿ ಮಾವಿನ ಹಣ್ಣು ಅನ್ನು 1.13 ಲಕ್ಷದ ಪಾರ್ಸೆಲ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದು ಕೆ.ಪ್ರಕಾಶ್ ವಿವರಿಸಿದರು.