ಖಂಡ್ರೆಗೆ ಡಿಸಿಎಂ, ಸಮುದಾಯಕ್ಕೆ 8 ಸಚಿವ ಸ್ಥಾನಕ್ಕೆ ವೀರಶೈವ ಮಹಾಸಭೆ ಯುವ ಘಟಕ ಆಗ್ರಹ

ಈಶ್ವರ ಖಂಡ್ರೆಗೆ ಡಿಸಿಎಂ, ಸಮುದಾಯಕ್ಕೆ 8 ಸಚಿವ ಸ್ಥಾನಕ್ಕೆ ವೀರಶೈವ ಮಹಾಸಭೆ ಯುವ ಘಟಕ ಆಗ್ರಹ
ಈಶ್ವರ ಖಂಡ್ರೆಗೆ ಡಿಸಿಎಂ, ಸಮುದಾಯಕ್ಕೆ 8 ಸಚಿವ ಸ್ಥಾನಕ್ಕೆ ವೀರಶೈವ ಮಹಾಸಭೆ ಯುವ ಘಟಕ ಆಗ್ರಹ
Published on

ಪ್ರಮುಖ ಮುಖ್ಯಾಂಶಗಳು

  • ಈಶ್ವರ ಖಂಡ್ರೆಗೆ ಡಿಸಿಎಂ, ಸಮುದಾಯಕ್ಕೆ 8 ಸಚಿವ ಸ್ಥಾನ ನೀಡಿ
  • ವೀರಶೈವ ಲಿಂಗಾಯತ ಮಹಾಸಭೆ ಯುವ ಘಟಕ ಆಗ್ರಹ
  • ಜಿಬಿಎ ಚುನಾವಣೆಯಲ್ಲೂ ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯ

ಬೆಂಗಳೂರು:ನೂತನ ಸರ್ಕಾರರಚನೆಯ ಕಸರತ್ತು ನಡೆಯುತ್ತಿರುವುದರನಡುವೆ ಸಮುದಾಯವಾರು ಬೇಡಿಕೆಯಕೂಗು ಹೆಚ್ಚಾಗುತ್ತಿದೆ.ವೀರಶೈವ ಲಿಂಗಾಯತಸಮುದಾಯಕ್ಕೆ ಕನಿಷ್ಟ 8ಸಚಿವ ಸ್ಥಾನಹಾಗೂ ಈಶ್ವರ ಖಂಡ್ರೆಯವರಿಗೆಡಿಸಿಎಂ ಸ್ಥಾನ ನೀಡುವಂತೆ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯಯುವ ಘಟಕ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅಭಾವೀಮ ಯುವ ಘಟಕದಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್,ರಾಜ್ಯದಲ್ಲಿಕಾಂಗ್ರೆಸ್ ಪಕ್ಷ ಅಧಿಕಾರಕ್ಕೆಬರುವುದರ ಹಿಂದೆ ವೀರಶೈವ ಲಿಂಗಾಯತಸಮುದಾಯದ ಕೊಡುಗೆ ಅಪಾರವಾಗಿದೆ.ಪಕ್ಷ 50ಜನರಿಗೆ ಟಿಕೆಟ್ನೀಡಿದ್ದು,ಅದರಲ್ಲಿ 37ಜನರು ಶಾಸಕರಾಗಿಆಯ್ಕೆಯಾಗಿದ್ದಾರೆ.ಈ ಪೈಕಿ 7ಜನರನ್ನು ಸಚಿವರಾಗಿನೇಮಕ ಮಾಡಿದ್ದು ಎಲ್ಲ ಸಚಿವರುಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ.ಆದ್ದರಿಂದನೂತನವಾಗಿ ರಚನೆಯಾಗುವ ಸರ್ಕಾರದಲ್ಲಿಸಮುದಾಯದ ಮತ್ತಷ್ಟು ಜನರಿಗೆಅವಕಾಶ ದೊರೆಯಬೇಕು.ವಿಶೇಷವಾಗಿಅರಣ್ಯ ಖಾತೆ ಸಚಿವರಾಗಿ ಅತ್ಯಂತಕ್ರಿಯಾಶೀಲವಾಗಿ ಕೆಲಸನಿರ್ವಹಿಸಿರುವುದಷ್ಟೇ ಅಲ್ಲದೆ,ಸ್ವತಃ ಕೆಪಿಸಿಸಿಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿವಿಶೇಷ ಕೊಡುಗೆ ನೀಡಿರುವ ಈಶ್ವರಖಂಡ್ರೆಯವರನ್ನು ಉಪಮುಖ್ಯಮಂತ್ರಿಗಳನ್ನಾಗಿನೇಮಿಸಬೇಕೆಂದು ಒತ್ತಾಯಿಸಿದರು.

ಈಶ್ವರಖಂಡ್ರೆ ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭೆಯ ರಾಷ್ಟ್ರೀಯಅಧ್ಯಕ್ಷರಾಗಿದ್ದು,ಸಮುದಾಯದ ಸಂಘಟನೆ,ಪಕ್ಷದ ಚಟುವಟಿಕೆಹಾಗೂ ಅತ್ಯಂತ ಕ್ರಿಯಾಶೀಲ ಸಚಿವರಲ್ಲಿಒಬ್ಬರಾಗಿ ಹೆಸರು ಮಾಡಿದ್ದಾರೆ.ಇವರನ್ನು ಡಿಸಿಎಂಮಾಡುವುದರಿಂದ ಪಕ್ಷಕ್ಕೆ,ಸರ್ಕಾರಕ್ಕೆಹೆಚ್ಚಿನ ಉಪಯೋಗವಾಗಲಿದೆ.ಹಾಗೂ ವೀರಶೈವಲಿಂಗಾಯತ ಸಮುದಾಯದ ಒಗ್ಗೂಡುವಿಕೆಗೂಬಲ ಬರುತ್ತದೆ ಎಂಬುದು ಸಮುದಾಯದಮುಖಂಡರ ಅಭಿಪ್ರಾಯ.

ಸುದ್ದಿಗೋಷ್ಠಿಯಲ್ಲಿಅಭಾವೀಮ ಯುವ ಘಟಕದ ರಾಜ್ಯಾಧ್ಯಕ್ಷಮನೋಹರ ಅಬ್ಬಿಗೆರೆ,ಕೈಗಾರಿಕಾ ಘಟಕದವಿಜಯಕುಮಾರ್ ಪಾಟೀಲ್ ಮುಖಂಡರಾದಸಂದೀಪ್ ಅಣಬೇರು ಮತ್ತಿತರರುಉಪಸ್ಥಿತರಿದ್ದರು.

ವೀರೇಂದ್ರ ಪಾಟೀಲ್ ನಂತರ ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಪ್ರಾತಿನಿಧ್ಯ ದೊರೆತಿಲ್ಲ. ಆದ್ದರಿಂದ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ 3 ಸ್ಥಾನದ ಟಿಕೆಟ್‌ಗಳನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net