ಫ್ರೀಡಂ ಸನ್‌ಫ್ಲವರ್ ಆಯಿಲ್‌ನಿಂದ ‘ಪಿಆರ್‌ಎಸ್’

ಭಾರತದ ಪ್ರಮುಖ ಖಾದ್ಯ ತೈಲ ಬ್ರ್ಯಾಂಡ್ ‘ಫ್ರೀಡಂ ಸನ್‌ಫ್ಲವರ್ ಆಯಿಲ್’ ಹಮ್ಮಿಕೊಂಡಿರುವ ಬೃಹತ್ ಜಾಗೃತಿ ಅಭಿಯಾನದಲ್ಲಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್
ಭಾರತದ ಪ್ರಮುಖ ಖಾದ್ಯ ತೈಲ ಬ್ರ್ಯಾಂಡ್ ‘ಫ್ರೀಡಂ ಸನ್‌ಫ್ಲವರ್ ಆಯಿಲ್’ ಹಮ್ಮಿಕೊಂಡಿರುವ ಬೃಹತ್ ಜಾಗೃತಿ ಅಭಿಯಾನದಲ್ಲಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್
Published on

ಪ್ರಮುಖ ಮುಖ್ಯಾಂಶಗಳು

  • ಖಾದ್ಯ ತೈಲ ಪ್ಯಾಕ್‌ನ ತೂಕ ಬಗ್ಗೆ ಜಾಗೃತಿ ಅಭಿಯಾನ
  • ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾಗಿ
  • ‘ಪ್ಯಾಕ್ ರಿವ್ಯೆ ಸಿಸ್ಟಮ್’ ಕುರಿತು ಅರಿವು
ಬೆಂಗಳೂರು: ಗ್ರಾಹಕರು ತಾವು ಖರೀದಿಸುವ ಖಾದ್ಯ ತೈಲದ ಪ್ಯಾಕೆಟ್‌ಗಳಲ್ಲಿ ನಿಗದಿತ ಪ್ರಮಾಣದ ಎಣ್ಣೆ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ‘ಪ್ಯಾಕ್ ರಿವ್ಯೆ ಸಿಸ್ಟಮ್’ (ಪಿಆರ್‌ಎಸ್) ಅಳವಡಿಸಿಕೊಳ್ಳುವಂತೆ ಮಾಜಿ ಕ್ರಿಕೆಟಿಗ ಹಾಗೂ ತರಬೇತುದಾರ ರಾಹುಲ್ ದ್ರಾವಿಡ್ ಕರೆ ನೀಡಿದ್ದಾರೆ.
ಭಾರತದ ಪ್ರಮುಖ ಖಾದ್ಯ ತೈಲ ಬ್ರ್ಯಾಂಡ್ ‘ಫ್ರೀಡಂ ಸನ್‌ಫ್ಲವರ್ ಆಯಿಲ್’ ಹಮ್ಮಿಕೊಂಡಿರುವ ಬೃಹತ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾನದಂಡಗಳ ಪ್ರಕಾರ, 1 ಲೀಟರ್ ಪೌಚ್‌ನಲ್ಲಿ ಕನಿಷ್ಠ 910 ಗ್ರಾಂ ಖಾದ್ಯತೈಲ ಇರಲೇಬೇಕು. ಆದರೆ ಮಾರುಕಟ್ಟೆಯಲ್ಲಿ ಕೆಲವು ಉತ್ಪಾದಕರು 1 ಲೀಟರ್ ಪ್ಯಾಕೆಟ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಎಣ್ಣೆಯನ್ನು ತುಂಬಿಸಿ ಮಾರಾಟ ಮಾಡುತ್ತಿದ್ದು, ಆ ಬಗ್ಗೆ ಬೆಳಕು ಚೆಲ್ಲುವುದು ಈ ಅಭಿಯಾನದ ಉದ್ದೇಶ. ಈ ಸಂಬಂಧ ಫ್ರೀಡಂ ಸನ್ ಫ್ಲವರ್ ಆಯಿಲ್ ತಯಾರಕರಾದ ಜಿಇಎ್ ಇಂಡಿಯಾ ಕಂಪನಿ ವಿಶೇಷ ಪ್ರಾತ್ಯಕ್ಷಿಕೆ ನಡೆಸಿತು.
ಈ ವೇಳೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬ್ರ್ಯಾಂಡ್‌ಗಳ ಎಣ್ಣೆ ಪ್ಯಾಕೆಟ್‌ಗಳನ್ನು ತೂಕದ ಯಂತ್ರದ ಮೇಲಿಟ್ಟು ಪರಿಶೀಲಿಸಲಾಯಿತು. ಈ ಮೌಲ್ಯಮಾಪನದಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು. ಕೆಲವು ಪ್ಯಾಕ್‌ಗಳು ನಿಗದಿತ 910 ಗ್ರಾಂಗಿಂತಲೂ ಕಡಿಮೆ ತೂಕ ಹೊಂದಿದ್ದವು. ಇದೇ ವೇಳೆ ಫ್ರೀಡಂ ಸನ್‌ಫ್ಲವರ್ ಆಯಿಲ್ ಪೌಚ್‌ಗಳು ಪ್ರತಿ ಬಾರಿಯೂ ನಿಖರವಾದ ತೂಕ ಹೊಂದಿರುವುದು ದೃಢಪಟ್ಟಿತು. ಹಾಗಾಗಿ ಪ್ಯಾಕ್ ರಿವ್ಯೆ ಸಿಸ್ಟಮ್ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.
ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಚೇತನ್ ಪಿಂಪಲ್ಕುಟೆ ಮಾತನಾಡಿ, ಮಾಹಿತಿಯುಳ್ಳ ಗ್ರಾಹಕನೇ ಸುರಕ್ಷಿತ ಗ್ರಾಹಕ ಎಂದು ನಾವು ನಂಬಿದ್ದೇವೆ. ಡಿಜಿಟಲ್ ಮಾಧ್ಯಮ, ಸಾಂಪ್ರದಾಯಿಕ ಜಾಹೀರಾತುಗಳು ಮತ್ತು ಚಟುವಟಿಕೆಗಳ ಮೂಲಕ ಈ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಭಾರತದ ಪ್ರತಿಯೊಂದು ಕುಟುಂಬವು ಎಣ್ಣೆ ಪ್ಯಾಕೆಟ್‌ನ ತೂಕ ಪರೀಕ್ಷಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕಿದೆ. ಇದು ಸರಳ ಹಾಗೂ ಪರಿಣಾಮಕಾರಿ ಅಭ್ಯಾಸಗಳಾಗಿವೆ ಎಂದು ತಿಳಿಸಿದರು.

ಪ್ರತಿ ಕುಟುಂಬವು ತಾವು ನೀಡುವ ಹಣಕ್ಕೆ ತಕ್ಕ ಮೌಲ್ಯದ ಉತ್ಪನ್ನವನ್ನೇ ಪಡೆಯುತ್ತಿದ್ದೇವೆ ಎಂಬ ವಿಶ್ವಾಸ ಮೂಡಿಸುವುದು ನಮ್ಮ ಗುರಿ. ಲೇಬಲ್ ಓದುವ ಮೂಲಕ ಮತ್ತು ತೂಕವನ್ನು ಗ್ರಾಹಕರು ಪರಿಶೀಲಿಸಬೇಕು. ಇಂತಹ ಸರಳ ಅಭ್ಯಾಸಗಳು ಮಾರುಕಟ್ಟೆಯಲ್ಲಿ ಪ್ರಾಮಾಣಿಕತೆಯನ್ನು ಉತ್ತೇಜಿಸುತ್ತವೆ.

ಗ್ರಾಹಕರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ಸಬಲೀಕರಣಗೊಳಿಸುವ ‘ಪ್ಯಾಕ್ ರಿವ್ಯೆ ಸಿಸ್ಟಮ್’ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ಜಿಇಎಸ್ ಇಂಡಿಯಾವನ್ನು ಅಭಿನಂದಿಸುತ್ತೇನೆ. ವಂಚನೆಗಳಿಂದ ದಾರಿ ತಪ್ಪುವುದನ್ನು ತಡೆಯಲು ಗ್ರಾಹಕರೇ ‘ಥರ್ಡ್ ಅಂಪೈರ್’ನಂತಾಗಬೇಕು. ಆಹಾರದಲ್ಲಿ ಎಣ್ಣೆಯ ಬಳಕೆ ಕಡಿಮೆ ಇರಲಿ, ಆದರೆ ಪ್ಯಾಕೆಟ್‌ನಲ್ಲಿ ಎಣ್ಣೆ ಕಡಿಮೆ ಇರಬಾರದು ಎಂಬ ಮಾತು ಅತ್ಯಂತ ಸೂಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net