ಹೋರಾಟದ ಫಲದಿಂದ ಉಚಿತ ಬೀಜ ವಿತರಣೆ

ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ರೈತರಿಗೆ ಬೀಜ ವಿತರಿಸಲಾಯಿತು. ಅಭಿಲಾಷ ಸುಬೇದಾರ, ಚಂದ್ರಶೇಖರ ಗುತ್ತೇದಾರ್​, ಬಸವರಾಜ ದೇಶಮುಖ, ಶಿವಕುಮಾರ ಅಂಬಲಗಿ, ಗೋಪಾಲ ಎಂ.ಪಿ., ಸಂಗಯ್ಯ ಸ್ವಾಮಿ, ಮೋಹನ ಗುತ್ತೇದಾರ್​ ಇತರರಿದ್ದರು.
ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ರೈತರಿಗೆ ಬೀಜ ವಿತರಿಸಲಾಯಿತು. ಅಭಿಲಾಷ ಸುಬೇದಾರ, ಚಂದ್ರಶೇಖರ ಗುತ್ತೇದಾರ್​, ಬಸವರಾಜ ದೇಶಮುಖ, ಶಿವಕುಮಾರ ಅಂಬಲಗಿ, ಗೋಪಾಲ ಎಂ.ಪಿ., ಸಂಗಯ್ಯ ಸ್ವಾಮಿ, ಮೋಹನ ಗುತ್ತೇದಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಚಂದ್ರಶೇಖರ ಗುತ್ತೇದಾರ್​ ಹೇಳಿಕೆ
  • ಗಾರಂಪಳ್ಳಿಯಲ್ಲಿ ಕೃಷಿ ಇಲಾಖೆ ಕಾರ್ಯಕ್ರಮ
ಚಿಂಚೋಳಿ: ಕಸ್ಕೋಟಾ ಕಳೆ ಪರವಾಲಂಬಿ ಕಳೆಯಾಗಿದ್ದು, ನಿಯಂತ್ರಣಕ್ಕೆ ಔಷಧವಿಲ್ಲ. ತಾಲೂಕು ಸೇರಿ ಕಲಬುರಗಿ, ಬೀದರ್​, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ. ಗ್ರಾಮಸ್ಥರ ಹೋರಾಟದ ಫಲವಾಗಿ ಇಂದು ಎಲ್ಲರಿಗೂ ಉಚಿತ ಬೀಜ ಲಭ್ಯವಾಗುತ್ತಿದೆ ಎಂದು ಉದ್ಯಮಿ ಚಂದ್ರಶೇಖರ ಗುತ್ತೇದಾರ್​ ಹೇಳಿದರು.
ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಎಂ.ಬಿ.ಅಂಬಲಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಆತ್ಮನಿರ್ಭರತಾ ಯೋಜನೆಯಡಿ ಉಚಿತ ಬೀಜ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಕಸ್ಕೋಟಾ ಕುರಿತು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರಿಂದಲೇ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿದೆ. ಹೈದರಾಬಾದ್​ ವಿಶ್ವವಿದ್ಯಾಲಯದ ವಿಾನಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಬಳಿಕ ವರದಿಯಂತೆ ಕ್ರಮ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಹಾಯಕ ಕೃಷಿ ನಿರ್ದೇಶಕ ಅಭಿಲಾಷ ಸುಬೇದಾರ, ಪ್ರಮುಖರಾದ ಬಸವರಾಜ ದೇಶಮುಖ, ಗೋಪಾಲ ಎಂ.ಪಿ., ಬಸವರಾಜ ದೇಶಮುಖ, ಶಿವಕುಮಾರ ಅಂಬಲಗಿ, ಸಂಗಯ್ಯ ಸ್ವಾಮಿ, ಮೋಹನ ಗುತ್ತೇದಾರ್​, ರೇವಣಸಿದ್ದಪ್ಪ ಮೇಲಿನಕೇರಿ, ಇಸ್ಮಾಯಿಲ್​, ನಾಗರಾಜ ಗುತ್ತೇದಾರ್​, ರಜನಿಕಾಂತ ಬುಳ್ಳಾ, ಅಮೃತ ಮಡಿವಾರ, ಮೌನೇಶ ಮುಸ್ತಾರಿ ಇತರರಿದ್ದರು.
"

ಕಸ್ಕೋಟಾ ನಿಯಂತ್ರಣಕ್ಕಾಗಿ ವಿಶೇಷ ಸಂಶೋಧನೆ ನಡೆಸಲು ಈಗಾಗಲೇ ಹೈದರಾಬಾದ್​ ವಿಾನಿಗಳು ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರವು ತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕು. ವರದಿ ಆಧಾರಿತ ರೈತರಿಗೆ ಪರಿಹಾರ ಕಲ್ಪಿಸಬೇಕು. ಕೇವಲ ಬೀಜ ವಿತರಣೆಗೆ ಸುಮ್ಮನಿರುವುದಿಲ್ಲ. ಗೊಬ್ಬರ ಪೂರೈಸಬೇಕು. ಇಲ್ಲದಿದ್ದರೆ ಕೃಷಿ ಕಚೇರಿ ಮುಂದೆ ಪ್ರತಿಭನೆಗೆ ಸಜ್ಜಾಗಬೇಕಾಗುತ್ತದೆ.

— > ಗೋಪಾಲ ಎಂ.ಪಿ., ಅಧ್ಯ, ಕಸ್ಕೋಟಾ ನಿಮೂರ್ಲನೆ ಹೋರಾಟ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net