‘ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ಯಂಡ್ ಎಂಡೋಕ್ರೈನಾಲಜಿ ಆ್ಯಂಡ್ ರಿಸರ್ಚ್‌ನಲ್ಲಿ (ಕೆಐಇಆರ್) 1,600 ಮತ್ತು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಅಂದಾಜು 850 ಮಕ್ಕಳು ಟೈಪ್-1 ಮಧುಮೇಹ ಚಿಕಿತ್ಸೆಗೆ ನೋಂದಾಯಿಸಿಕೊಂಡಿದ್ದಾರೆ. ಜತೆಗೆ, ರಾಜ್ಯದ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸಾವಿರಾರು ಮಕ್ಕಳು ಹೆಸರು ನೋದಣಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಇಂದಿರಾ ಗಾಂಧಿ ಸಂಸ್ಥೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ನೆರವಿನೊಂದಿಗೆ ಉಚಿತವಾಗಿ ಮಕ್ಕಳಿಗೆ ಇನ್ಸುಲಿನ್ ನೀಡಲಾಗುತ್ತಿದೆ. ಆದರೆ, ಸರ್ಕಾರದಿಂದ ನಮಗೆ ಇನ್ಸುಲಿನ್ ಔಷಧಗಳನ್ನು ಸರಬರಾಜು ಮಾಡಿಲ್ಲ ಎನ್ನುತ್ತಾರೆ ಅಲ್ಲಿನ ವೈದ್ಯರು. 8 ವರ್ಷದ ಮಗನಿಗೆ ಇನ್ಸುಲಿನ್ ಕೊಡಿಸಲು ಪ್ರತಿ ತಿಂಗಳು ಕನಿಷ್ಠ 4,500 ರೂ.ಖರ್ಚಾಗುತ್ತಿದೆ. ಸರ್ಕಾರದಿಂದ ಉಚಿತವಾಗಿ ಇನ್ಸುಲಿನ್ ಕೊಟ್ಟರೆ ನಮ್ಮಂತಹ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ. ಹಾಗಾಗಿ, ಈ ಯೋಜನೆಯನ್ನು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.