ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಸ್ಪತ್ರೆಯ ಮುಖ್ಯಸ್ಥರೂ ಆದ ಹಿರಿಯ ವೈದ್ಯ ಡಾ.ಸಿ.ಎಂ.ಪಾಟೀಲ್ ಅವರು ಹೃದಯ ಸಂಬಂಧಿ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ರೋಗ ನಿಯಂತ್ರಣಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆ, ಇಸಿಜಿ, ಬಿಪಿ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು. ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಹಾಗೂ ನೇತ್ರತ ಡಾ.ಎಚ್.ಭೀಮರೆಡ್ಡಿ ಪಾಟೀಲ್ ಅವರ ನೇತೃತ್ವದಲ್ಲಿ ನೇತ್ರ ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಅಗತ್ಯವಿರುವವರಿಗೆ ಉಚಿತವಾಗಿ ಶಸಚಿಕಿತ್ಸೆ ಮಾಡಲಾಗುವುದು. ಶಸಚಿಕಿತ್ಸೆಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸಲಾಗುವುದು. ಹಿರಿಯ ವೈದ್ಯ ಸಿ.ಎಂ. ಪಾಟೀಲ್ ಅವರು ಪತ್ರಕರ್ತರ ಸೇವೆ ಮನಗಂಡು ಶಿಬಿರವನ್ನು ನಡೆಸಲು ಸಹಕರಿಸಿದ್ದು, ಹೀಗಾಗಿ ಪತ್ರಕರ್ತರು ಕಡ್ಡಾಯವಾಗಿ ಸಂಘದ ಈ ವರ್ಷದ ಕಾರ್ಡ್-9 ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಇಲ್ಲದೇ ಹೊದಲ್ಲಿ ಚಿಕಿತ್ಸೆಗೆ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.