ಸಂಸ್ಕೃತಿ ಬೆಳೆಸುವುದು ಅತ್ಯಂತ ಜರೂರಿ

ಕಲಬುರಗಿಯಲ್ಲಿ ಆ.9ರಂದು ಆಯೋಜಿಸಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಮಂಗಳವಾರ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಬಾಬುರಾವ ಪಾಟೀಲ್​,
ಕಲಬುರಗಿಯಲ್ಲಿ ಆ.9ರಂದು ಆಯೋಜಿಸಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಮಂಗಳವಾರ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಬಾಬುರಾವ ಪಾಟೀಲ್​,
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರೇವೂರ ಅನಿಸಿಕೆ
  • ದಾಸ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ
ಕಲಬುರಗಿ: ವಿದೇಶಿ ವ್ಯಾಮೋಹ ಹೆಚ್ಚಿರುವ ಇಂದಿನ ದಿನಗಳಲ್ಲಿ ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಅತಿ ಅಗತ್ಯವಾಗಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಮತ್ತು ದಕ್ಷಿಣ ವಲಯ ಸಹಯೋಗದಡಿ ಆ.9ರಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದಾಸರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವ ಸಮೂಹ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪರಿಷತ್​ ಪ್ರಮುಖರಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಬಾಬುರಾವ ಪಾಟೀಲ್​, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ಪರಮಾನಂದ ಸರಸಂಬಿ, ಅಮೃತಪ್ಪ ಅಣೂರ, ರಾಜೇಂದ್ರ ಮಾಡಬೂಳ, ರಾಜಶೇಖರ ಚಿಂಚೋಳಿ, ಗಂಗಾಧರ ಬಂಗರಗಿ, ಮಹಾಲಿಂಗಯ್ಯ ಸ್ವಾಮಿ, ಚಂದ್ರಕಾಂತ ಸೂರನ್​, ಸಂಗಪ್ಪ ಚೋರಗಸ್ತಿ ಇತರರಿದ್ದರು.
ಸಮ್ಮೇಳನದ ವಿವರ: ಕನ್ನಡ ಭವನದಲ್ಲಿ ಸುರಪುರ ಆನಂದದಾಸರು ವೇದಿಕೆಯಡಿ ಹಿರಿಯ ದಾಸ ಸಾಹಿತಿ ಡಾ.ಸುರೇಶ ಜಾಧವ್​ ಸರ್ವಾಧ್ಯಕ್ಷತೆಯ ಸಮ್ಮೇಳನವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಡಿ.ಬಿ. ನಾಯಕ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಶ್ರೀನಿವಾಸ ಸಿರನೂರಕರ್​, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್​ ರೇವೂರ ಇತರರು ಭಾಗವಹಿಸುವರು. ವಿವಿಧ ೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶೇಷಮೂರ್ತಿ ಅವಧಾನಿ, ಕೃಷ್ಣಾಜಿ ಕುಲಕರ್ಣಿ, ಮುದಗಲ್​ ವೆಂಕಟೇಶ, ಶಾಮರಾವ ಚಿಂಚೋಳಿ, ಗೋಪಾಲರಾವ ಟೆಂಗಳಿ, ಡಾ.ರಮೇಶ ಕುಲಕರ್ಣಿ, ಬಾಬುರಾವ ಕೋಬಾಳ, ಸುರೇಶ ಕೊಟಗಿ, ಬಾಬುರಾವ ಕುಲಕರ್ಣಿ ಅವರಿಗೆ ದಾಸಾಮೃತ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುತ್ತದೆ.
"

ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಿರುವ ಕನ್ನಡ ಸಾಹಿತ್ಯ ಪರಿಷತ್​ ಕಾರ್ಯ ಶ್ಲಾಘನೀಯ. ನಿರಂತರ ಹತ್ತು-ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಕನ್ನಡ ಭವನವನ್ನು ಸಾಂಸ್ಕೃತಿಕ ಕೇಂದ್ರವಾಗಿ ಮಾಡಿದ್ದಾರೆ.

— > ದತ್ತಾತ್ರೇಯ ಪಾಟೀಲ್​ ರೇವೂರ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net