ಕಾಡುಗೊಲ್ಲರ ಅಭಿವೃದ್ಧಿಗೆ ಯೋಜನೆ ರೂಪಿಸಿ

ಮಾಗಡಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಚಂದ್ರಗಿರಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡರಾದ ಶ್ರೀಪತಿಹಳ್ಳಿ ರಾಜಣ್ಣ, ಕರಿಯಪ್ಪ, ರಾಮನಗರ ತಾಲೂಕಿನ ಗಿರಿಸ್ವಾಮಿ, ಯುವ ಮುಖಂಡ ಮಹಾಲಿಂಗಯ್ಯ ಇತರರು ಇದ್ದರು.
ಮಾಗಡಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಚಂದ್ರಗಿರಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡರಾದ ಶ್ರೀಪತಿಹಳ್ಳಿ ರಾಜಣ್ಣ, ಕರಿಯಪ್ಪ, ರಾಮನಗರ ತಾಲೂಕಿನ ಗಿರಿಸ್ವಾಮಿ, ಯುವ ಮುಖಂಡ ಮಹಾಲಿಂಗಯ್ಯ ಇತರರು ಇದ್ದರು.
Published on

ನಾವು ಕಾಡುಗೊಲ್ಲರು ಎಂದು ಪ್ರತಿಯೊಬ್ಬರೂ ಎದೆ ಉಬ್ಬಿಸಿಕೊಂಡು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ರಾಜ್ಯ ಕಾಡುಗೊಲ್ಲರ ಸಂಘದ ನೂತನ ಜಿಲ್ಲಾಧ್ಯಕ್ಷ ಚಂದ್ರಗಿರಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಶೀಘ್ರ ವಿಶೇಷ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದಶಕಗಳಿಂದ ವಾಸಿಸುತ್ತಿರುವ ಸಾವಿರಾರು ಕಾಡುಗೊಲ್ಲರ ಹಟ್ಟಿಗಳನ್ನು ಇಂದಿಗೂ ಕಂದಾಯ ಗ್ರಾಮಗಳೆಂದು ಘೋಷಿಸಿಲ್ಲ. ಇದರಿಂದಾಗಿ ಹಟ್ಟಿಗಳಿಗೆ ಸಿಗಬೇಕಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಮನೆ ನಿರ್ಮಾಣಕ್ಕೆ ತಾಂತ್ರಿಕ ತೊಡಕು ಉಂಟಾಗುತ್ತಿದೆ.
ತಕ್ಷಣವೇ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಘೋಷಣೆ ಮಾಡಬೇಕು. ಜತೆಗೆ ಸಮುದಾಯದ ಮಕ್ಕಳಿಗೆ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು. ಹಾಲಿನ ಉತ್ಪಾದನೆ ಮತ್ತು ಕುರಿ-ಮೇಕೆ ಸಾಕಣೆಯನ್ನೇ ನಂಬಿಕೊಂಡಿರುವ ಸಮಾಜಕ್ಕೆ ಆಧುನಿಕ ತಂತ್ರಜ್ಞಾನದ ತರಬೇತಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ಸರ್ಕಾರ ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗ ಯೋಜನೆ ರೂಪಿಸಬೇಕಿದೆ. ವಾರದೊಳಗೆ ಜಾತಿ ಪ್ರಮಾಣ ಪತ್ರ ಕೊಡಿಸಲಾಗುವುದು ಹಾಗೂ ಈಗಾಗಲೇ ನಿಗಮದ ಮೂಲಕ ಮನೆ ಮತ್ತು ಕೊಳವೆ ಬಾವಿಗಳ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ಪ್ರಸ್ತುತ ಶಾಸಕರು ಸಮುದಾಯಕ್ಕೆ 20 ಗುಂಟೆ ಜಾಗ ನೀಡಿದ್ದಾರೆ. ತಾಲೂಕಿನ 28 ಗೊಲ್ಲರ ಹಟ್ಟಿಗಳ ಅಭಿವೃದ್ಧಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು 22 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದು, ಶೀಘ್ರದಲ್ಲೇ ಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಕೆಂಚಪ್ಪ, ರಾಜಣ್ಣ, ಮುಖಂಡರಾದ ಶಿವಣ್ಣ, ಉಮೇಶ್, ನಾಗರಾಜು, ಪೊಲೊಹಳ್ಳಿ ಕೆಂಚಪ್ಪ, ಸುರೇಶ್, ರಂಗಸ್ವಾಮಿ, ಕುಮಾರ್, ಹನುಮಂತರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net