ಸವದತ್ತಿಗೆ ನಾಲ್ಕು ಪಬ್ಲಿಕ್​ ಶಾಲೆ

ವಿಶ್ವಾಸ ವೈದ್ಯ
ವಿಶ್ವಾಸ ವೈದ್ಯ
Published on
ಸವದತ್ತಿ: ತಾಲೂಕಿನ 4 ಸರ್ಕಾರಿ ಪ್ರೌಢಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕ ವಿಶ್ವಾಸ ವೈದ್ಯ ಅವರ ನಿರಂತರ ಪ್ರಯತ್ನದ ಲವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ಸವದತ್ತಿ ತಾಲೂಕಿನ ಅರ್ಟಗಲ್​, ಚುಳಕಿ, ಕಡಬಿ ಹಾಗೂ ಮಲ್ಲೂರ ಸರ್ಕಾರಿ ಪ್ರೌಢಶಾಲೆಗಳು ಇನ್ನು ಮುಂದೆ ಕರ್ನಾಟಕ ಪಬ್ಲಿಕ್​ ಶಾಲೆಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ೇತ್ರ ಶಿಣಾಧಿಕಾರಿ ಅಕ್ಬರಲಿ ಖಾಜಿ ತಿಳಿಸಿದ್ದಾರೆ.
ಸವದತ್ತಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು ನನ್ನ ಪ್ರಮುಖ ಗುರಿ. ಸರ್ಕಾರ ಈ ನಿಟ್ಟಿನಲ್ಲಿ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಣಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net