

ವಿದ್ಯಾರ್ಥಿ ಹಾಗೂ ಶಿಕರ ನಡುವೆ ಅವಿನಾಭಾವ ಸಂಬಂಧ ಇದೆ. ಪ್ರತಿಯೊಬ್ಬರೂ ಸಾಧನೆ ಪಥದಲ್ಲಿ ಸಾಗಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಚಿಕ್ಕುಂಬಿ ಅಜಾತ ನಾಗಲಿಂಗ ಮಠದ ಅಭಿನವ ನಾಗಲಿಂಗ ಸ್ವಾಮೀಜಿ ಹೇಳಿದರು. ರೇಣುಕಾದೇವಿ ಪ್ರೌಢಶಾಲೆಯಲ್ಲಿ 1995&96ನೇ ಬ್ಯಾಚ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತ ಶಿಕ ವೈ.ಆರ್.ಚನ್ನಪ್ಪಗೌಡ್ರ ಮಾತನಾಡಿ, ಯುವಜನರು ಹೆತ್ತವರನ್ನು ಗೌರವಿಸಬೇಕು. ಸಂಧ್ಯಾಕಾಲದಲ್ಲಿ ಹೆತ್ತವರ ಕಾಳಜಿ ಮಾಡಬೇಕು ಎಂದರು. ನಿವೃತ್ತ ಮುಖ್ಯಶಿಕ ವಿ.ಎಸ್.ಹಿರೇಮಠ ಮಾತನಾಡಿದರು. ಮುಖ್ಯಶಿಕಿ ಆರ್.ಪಿ.ಪವಾರ, ರೇಣುಕಾ ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಗೂಡ್ರಾಶಿ, ಎಸ್.ಎಸ್.ಚಿನಗುಡಿ, ವಿ.ಎಸ್.ಪಾಟೀಲ, ಎನ್.ಸಿ.ತೇಗೂರ, ಜಿ.ಎಂ.ಸುಂಬಳಿ, ವಿ.ಎಸ್.ಸಂಗೊಳ್ಳಿ, ಸಿ.ಬಿ.ಶೀಗಿಹಳ್ಳಿ, ಬಿ.ಎಸ್.ಕ್ಕೀರಸ್ವಾಮಿಮಠ, ವಿ.ಆರ್.ಅಗಡಿ, ಜಿ.ಜಿ.ಹಿರೇಗೌಡ್ರ, ಶೇಖರಗೌಡ ಪಾಟೀಲ ಇತರರಿದ್ದರು.