ಕೊಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂಟನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಿವಾನಂದ ಮಮದಾಪುರ, ನಿಜಲಿಂಗಪ್ಪ ಅಂಗಡಿ, ರಮೇಶ ಕರಚನ್ನವರ ಇತರರಿದ್ದರು.
ಮಮದಾಪುರ: ಶಿಣ ಯಾರು ಕದಿಯದಿರುವ ಆಸ್ತಿ. ಸದಢ ಸಮಾಜ ಹಾಗೂ ದೇಶ ನಿರ್ಮಿಸಲು ಎಲ್ಲ ಮಕ್ಕಳಿಗೆ ಉಚಿತ ಶಿಣ ಹಾಗೂ ಕಡ್ಡಾಯ ಶಿಣ ಅವಶ್ಯ ಎಂದು ಎಸ್ಡಿಎಂಸಿ ಅಧ್ಯ ಶಿವಾನಂದ ಮಮದಾಪುರ ಹೇಳಿದರು.
ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 8ನೇಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಸವಲತ್ತು ಸದುಪಯೋಗ ಪಡೆದುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎಂದರು.
ಮುಖ್ಯ ಶಿಕ ರಮೇಶ ಕರಚನ್ನವರ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಅವಧಿ ಸರಿಯಾಗಿ ಬಳಸಿಕೊಂಡು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಸಕ್ತ ಸಾಲಿನ ಆದರ್ಶ ವಿದ್ಯಾರ್ಥಿಗಳನ್ನಾಗಿ ಆಯ್ಕೆಯಾದವರನ್ನು ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆಗೆದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭೂದಾನಿ ನಿಜಲಿಂಗಪ್ಪ ಅಂಗಡಿ, ವಕೀಲ ಸಂಜು ಹಿರಟ್ಟಿ, ನಿಂಗಪ್ಪ ಕೇದಾರಿ, ಸಿಆರ್ಪಿ ಕೆ.ಕೆ.ಹೊಳ್ಕರ್, ಎಸ್ಡಿಎಂಸಿ ಸದಸ್ಯ ಮಹಾಂತೇಶ ಬಾಗೋಜಿ, ಸಹ ಶಿಕರಾದ ಹನುಮಂತ ಮೆಳವಂಕಿ, ಎಚ್.ವೆ.ಗಣೇಶ, ಸುವರ್ಣಾ ಕರೋಶಿ, ಆಶಾ ಬಟಕುರ್ಕಿ, ಕಲಾವತಿ ಕೆಂಚನ್ನವರ, ಜ್ಯೋತಿ ಹಿರೇಮಠ ಇತರರು ಇದ್ದರು.