ದೇಶದ ಭದ್ರತೆಗೆ ಮೊದಿ ಕೊಡುಗೆ ಅಪಾರ

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷಗಳ ಕಾಲ ಪೂರೈಸಿದ್ದರಿಂದ ಸುರಪುರನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷಗಳ ಕಾಲ ಪೂರೈಸಿದ್ದರಿಂದ ಸುರಪುರನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಅಭಿಮತ
  • ಸುರಪುರನಲ್ಲಿ ವಿಶೇಷ ಪೂಜೆ
ಸುರಪುರ: ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು 12 ವರ್ಷಗಳ ಸುದೀರ್ ಅವಧಿ ಪೂರೈಸಿ, ಬರೋಬ್ಬರಿ 4399 ದಿನಗಳ ಕಾಲ ಅತಿ ಹೆಚ್ಚು ದಿನ ಅಧಿಕಾರ ನಡೆಸಿದ ಪ್ರಧಾನಿ ಎಂಬ ಐತಿಹಾಸಿಕ ದಾಖಲೆ ಬರೆದಿರುವ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲ ವತಿಯಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ನೂ ಸುದೀರ್ ಕಾಲ ದೇಶದ ಪ್ರಧಾನಿಯಾಗಿ ಮುಂದುವರಿದು, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ಕೂರಿಸುವಂತಾಗಲಿ ಎಂದು ಬಿಜೆಪಿ ಕಾರ್ಯಕರ್ತರು ಭಕ್ತಿಯಿಂದ ಪ್ರಾರ್ಥಿಸಿದರು.
ನೇತೃತ್ವ ವಹಿಸಿದ್ದ ಸುರಪುರ ಬಿಜೆಪಿ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತೆ ಮೆಚ್ಚಿದ ಸಾಟಿಯಿಲ್ಲದ ವಿಶ್ವ ನಾಯಕ. ದೇಶದ ಭದ್ರತೆ, ಆರ್ಥಿಕ ಪ್ರಗತಿ, ಬಡವರ ಕಲ್ಯಾಣ ಯೋಜನೆ ಹಾಗೂ ಡಿಜಿಟಲ್​ ಕ್ರಾಂತಿ ಮೂಲಕ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಅವರ 12 ವರ್ಷಗಳ ಆಡಳಿತವು ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ. ಅವರು ಮತ್ತಷ್ಟು ಕಾಲ ದೇಶವನ್ನು ಮುನ್ನಡೆಸುವ ಶಕ್ತಿ ಆ ದೇವರು ಕರುಣಿಸಲಿ ಎಂದರು.
ಮುಖಂಡರಾದ ಸೋಮನಾಥ ಡೊಣ್ಣಿಗೇರಾ, ವಿಷ್ಣು ಗುತ್ತೇದಾರ್​, ಮಾನಪ್ಪ ಚಳ್ಳಿಗಿಡ, ಭೀಮಣ್ಣ ಬೇವಿನಾಳ, ವೆಂಕಟೇಶ ನಾಯಕ ಬೈರಿಮಡ್ಡಿ, ಶಂಕರ ನಾಯಕ, ಈಶ್ವರ ನಾಯಕ, ಲ್ಮಕಾಂತ ಬಿರಾದಾರ್​ ದೇವರಗೋನಾಲ, ದೇವರಾಜ್​ ಮಕಾಶಿ, ಭೀಮಾಶಂಕರ ಬಿಲ್ಲವ್​, ದತ್ತಾತ್ರೇಯ ಗುತ್ತೇದಾರ್​, ವಿಜಯಕುಮಾರ ಚಿಟ್ಟಿ, ಹಣಮಂತ ಹುಲಕಲ್​, ಬಸವರಾಜ ಕೊಡೇಕಲ್​, ಸಂಗನಗೌಡ ಕೋಳಿಹಾಳ, ವಾಲ್ಮೀಕಿ ಗುರು ನಾಯಕ, ವೀರಭದ್ರಪ್ಪ ಕುಂಬಾರ, ರಾಜಾ ಹರೀಶ ನಾಯಕ, ಚಂದ್ರಕಾಂತ ಎಲಿಗಾರ, ಮಂಜುನಾಥ ಬೈರಿಮಡ್ಡಿ, ಶ್ರೀನಿವಾಸ ಡೊಳ್ಳೆ, ನಿಂಗಯ್ಯ ತಾತಾ, ರೇಣುಕಾರಾಜ್​, ತಿರುಪತಿ ಡೊಣ್ಣಿಗೇರಾ, ರಾವೇಂದ್ರ ಡೊಣ್ಣಿಗೇರಾ, ಶ್ರೀನಿವಾಸ ಪೂಜಾರಿ, ಚಂದ್ರಶೇಖರ ಮಡಿವಾಳ, ನಾಗೇಂದ್ರ ದೊರೆ ಚಂದಲಾಪೂರ, ಗಂಗಾಧರ ನಾಯಕ ಅರಳಹಳ್ಳಿ, ಮೌನೇಶ ವಿಶ್ವಕರ್ಮ ಕೋನಾಳ, ಅರವಿಂದ ಬಿಲ್ಲವ್​, ಮನೋಜಕುಮಾರ, ಗುರುರಾಜ ಕುಲಕರ್ಣಿ, ವಿಜಯಕುಮಾರ ಕುಲಕರ್ಣಿ (ಸಪ್ತಗಿರಿ), ಈಶ್ವರಪ್ಪ ನಾಯಕ, ವಿಶ್ವನಾಥ ಮಂಗಲಗಿ, ಜಿತೇಂದ್ರ ಠಾಕೂರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net