ಜಿಇ ಕಾರ್ಖಾನೆ ಪ್ರದೇಶದಲ್ಲಿ ಅಗ್ನಿ ಅವಘಡ

ಶಹಾಬಾದ್​ನಿಂದ ಕಲಬುರಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಿಇ ಕಾರ್ಖಾನೆ ಪ್ರದೇಶದಲ್ಲಿ ಅಗ್ನಿ ಅವಡದಿಂದ ಸುಟ್ಟು ಹೋದ ಗಿಡ-ಮರಗಳು.
ಶಹಾಬಾದ್​ನಿಂದ ಕಲಬುರಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಿಇ ಕಾರ್ಖಾನೆ ಪ್ರದೇಶದಲ್ಲಿ ಅಗ್ನಿ ಅವಡದಿಂದ ಸುಟ್ಟು ಹೋದ ಗಿಡ-ಮರಗಳು.
Published on

ಪ್ರಮುಖ ಮುಖ್ಯಾಂಶಗಳು

  • ಅಗ್ನಿಶಾಮಕದಳದಿಂದ 6 ಗಂಟೆ ಕಾರ್ಯಾಚರಣೆ
  • 20ಕ್ಕಿಂತ ಹೆಚ್ಚು ಎಕರೆಯಲ್ಲಿ ಗಿಡ-ಮರ ನಾಶ
ಶಹಾಬಾದ್​: ನಗರದಿಂದ ಕಲಬುರಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ&150ರ ಪಕ್ಕದಲ್ಲಿರುವ ಜೆಇ ಕಾರ್ಖಾನೆ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಗ್ನಿ ಅವಡ ಸಂಭವಿಸಿದ್ದು, ಸುಮಾರು 20ಕ್ಕೂ ಹೆಚ್ಚಿನ ಎಕರೆಯಲ್ಲಿನ ಗಿಡ&ಮರಗಳು ಸುಟ್ಟು ಕರಕಲಾಗಿವೆ.
ವಾಡಿ ಕ್ರಾಸ್​ ಬಳಿಯ ಜೆಇ ಕಾರ್ಖಾನೆ ಸ್ಥಳದಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟು, ಪೋಷಿಸಿ, ಪರಿಸರ ಸಂರಕ್ಷಣೆ ಮಾಡಲಾಗಿತ್ತು. ಆದರೆ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿದ ನಂತರ ಇಲ್ಲಿಯ ಗಿಡ&ಮರಗಳಿಗೆ ಸಂರಸುವವರು ಯಾರೂ ಇಲ್ಲದಂತಾಗಿತ್ತು. ಇದರಿಂದ ಗಿಡಗಳ ಸುತ್ತ ಸುಮಾರು 10&12 ವರ್ಷದಿಂದ ಸಾಕಷ್ಟು ಹುಲ್ಲು, ಕಂಟಿ ಬೆಳೆದಿವೆ. ಬೇಸಿಗೆಯಲ್ಲಿ ಒಣಗಿ, ಮಳೆಗಾಲದಲ್ಲಿ ಚಿಗುರುತ್ತಿದ್ದವು.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಖಾನೆ ಸೆಕ್ಯೂರಿಟಿ ಸಿಬ್ಬಂದಿ ದಸ್ತಗಿರಿ ಸೇರಿ ಇತರರು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಗ್ನಿ ಎಲ್ಲೆಡೆ ಆವರಿಸಿ ಕೈಮೀರುವ ಹಂತ ತಲುಪಿದ್ದಾಗ ಚಿತ್ತಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿತು, ಆದರೆ ಅಷ್ಟೊತ್ತಿಗಾಗಲೇ ಬೆಂಕಿಯೂ ಸುಮಾರು 20 ಎಕರೆಗೆ ಆವರಿಸಿತ್ತು. ಗಿಡ&ಮರಗಳು, ಹುಲ್ಲು, ಕಂಟಿಗಳು ಸುಟ್ಟು ಹೋಗಿವೆ. ಬಿಸಿಲಿನ ಜತೆ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಹಬ್ಬಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕೊನೆಗೆ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ದಳದ ಠಾಣಾಧಿಕಾರಿ ನಾಗರಾಜ, ಸಹಾಯಕ ಠಾಣಾಧಿಕಾರಿ ಶರಣಯ್ಯ, ಲೀಡಿಂಗ್​ ಫೈರ್​ ಫೈಟರ್​ ರವೀಂದ್ರ ಚವ್ಹಾಣ್​, ಫೈರ್​ ಫೈಟರ್​ ಬಿ.ಶಿವಾನಂದ, ಚಾಲಕರಾದ ಚಂದ್ರಶಾ, ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net