ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್​ಐಆರ್​ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್​ ಶರೀಫ್​ ಬುಧವಾರ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐಎಎಸ್​ ಪ್ರೊಬೇಷನರ್​ ಅಧಿಕಾರಿ ಶಿಖರ್​ ಮೋಘಾ ಇದ್ದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್​ಐಆರ್​ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್​ ಶರೀಫ್​ ಬುಧವಾರ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐಎಎಸ್​ ಪ್ರೊಬೇಷನರ್​ ಅಧಿಕಾರಿ ಶಿಖರ್​ ಮೋಘಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ
  • ರಾಜಕಿಯ ಪಕ್ಷಗಳೊಂದಿಗೆ ಡಿಸಿ ಮಾಹಿತಿ ವಿನಿಮಯ
ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 01-10-2026 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಜುಲೈ 29ರವರೆಗೆ ಬಿಎಲ್​ಓಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ, ಸಂಗ್ರಹಣೆ ಮಾಡಿ, ಮೊಬೈಲ್​ ತಂತ್ರಾಂಶದಲ್ಲಿ ಡಿಜಿಟೈಸ್​ ಮಾಡಲಿದ್ದಾರೆ. ಈ ಅವಧಿಯಲ್ಲಿ ಮತಗಟ್ಟೆಗಳ ರ್ಯಾಷ್ನಲೈಜೇಶನ್​ ಕಾರ್ಯವೂ ನಡೆಯಲಿದೆ. ಒಟ್ಟಾರೆ ಅಕ್ಟೋಬರ್​ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿ ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಸೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿಯ ಮಾಹಿತಿ ಹಂಚಿಕೊಂಡರು.
ಆಗಸ್ಟ್​ 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ಸೆಪ್ಟೆಂಬರ್​ 4ರವರೆಗೆ ಆೇಪಣೆ ಆಹ್ವಾನಿಸಿ ಅಕ್ಟೋಬರ್​ 3ರೊಳಗೆ ಆೇಪಣೆ ವಿಲೇವಾರಿ ಮಾಡಿ, ಅಕ್ಟೋಬರ್​ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲೆಯಾದ್ಯಂತ ಈವರೆಗೆ ಬಿಎಲ್​ಓಗಳು ಮನೆ&ಮನೆಗೆ ಹೋಗಿ ಒಟ್ಟು 23,71,542 ಮತದಾರರ ಪೈಕಿ 23,35,062 (ಶೇ.98.46) ರಷ್ಟು ಗಣತಿ ನಮೂನೆ ವಿತರಣೆ ಮಾಡಿದ್ದಾರೆ. ಜತೆಗೆ 6,86,812 (ಶೇ.28.96) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್​ ತಂತ್ರಾಂಶದಲ್ಲಿ ಡಿಜಿಟೈಸ್​ ಮಾಡಿದ್ದಾರೆ. ಇನ್ನು 5,585 (ಶೇ.0.24) ಮತದಾರರು ಸ್ವಯಂ ಪ್ರೇರಿತವಾಗಿ ಆನ್​ ಲೈನ್​ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿಎಲ್​ಓಗಳು ಮನೆ&ಮನೆ ಭೇಟಿ ನೀಡಿದಾಗ ಈವರೆಗೆ 6,156 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಮತ್ತು 6,924 ಜನ ಮತದಾರರು ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ ಎಂದು ರಾಜಕೀಯ ಪಕ್ಷಗಳ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐಎಎಸ್​ಪ್ರೊಬೇಷನರ್​ ಅಧಿಕಾರಿ ಶಿಖರ್​ ಮೋಘಾ ಇತರರಿದ್ದರು.
"

ಎಸ್​ಐಆರ್​ ಕಾರ್ಯ ಸುಗಮವಾಗಿ ನಡೆಯಲು ಜಿಲ್ಲೆಯ ಎಲ್ಲ 2400 ಮತಗಟ್ಟೆಗಳಿಗೆ ಬಿಎಲ್​ಓ ನೇಮಿಸಿದ್ದು, ಮತದಾರರ ನೆರವಿಗೆ 2,400 ವೋಟರ್​ ಫೆಸಿಲಿಟೇಶನ್​ ಸೆಂಟರ್​ ಮತ್ತು ಬಿಎಲ್​ಓಗಳ ಸಹಾಯಕ್ಕೆ 283 ಫೆಸಿಲಿಟೇಶನ್​ ಸೆಂಟರ್​ ಸ್ಥಾಪಿಸಲಾಗಿದೆ. ಈ ಕಾರ್ಯ ನಿಖರ, ದೋಷರಹಿತ ಮತ್ತು ಪಾರದರ್ಶಕವಾಗಿ ತಯಾರಿಸಲು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು.

— ಇಕ್ರಮ್​ ಶರೀಫ್​, ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net