ಉಡಿತುಂಬುವುದು ಸಮೃದ್ಧಿ ಸಂಕೇತ

ಚಿತ್ತಾಪುರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಮುತೆದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಬಸವಲಿಂಗ ಶಿವಾಚಾರ್ಯ, ಶ್ರೀ ಶಿವಶಂಕರ ಶಿವಾಚಾರ್ಯ ಇತರರಿದ್ದರು.
ಚಿತ್ತಾಪುರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಮುತೆದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಬಸವಲಿಂಗ ಶಿವಾಚಾರ್ಯ, ಶ್ರೀ ಶಿವಶಂಕರ ಶಿವಾಚಾರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂಬಳೇಶ್ವರ ಶ್ರೀ ನುಡಿ
  • ಚಿತ್ತಾಪುದಲ್ಲಿ ಗುರು ಪಾದಪೂಜೆ, ವರಮಹಾಲಕ್ಷ್ಮೀ ಹಬ್ಬ
ಚಿತ್ತಾಪುರ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನಿಯ ಸ್ಥಾನವಿದೆ. ಮುತೆದೆಯರಿಗೆ ಉಡಿತುಂಬುವುದು ದೇಶದ ಸಮೃದ್ಧಿಯ ಸಂಕೇತವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ನುಡಿದರು.
ಶ್ರೀ ಶಿವಶಂಕರ ಮಠದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಗುರು ಪಾದಪೂಜೆ ಹಾಗೂ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಮುತೆದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮುತೆದೆಯರಲ್ಲಿ ದೈವಿ ಶಕ್ತಿ ಇರುತ್ತದೆ, ಹೀಗಾಗಿ ದೇಶದಲ್ಲಿ ಉತ್ತಮ ಮಳೆ-ಬೆಳೆ ಆಗಲೆಂದು ಪ್ರಾರ್ಥಿಸಬೇಕು ಎಂದು ಹೇಳಿದರು.
ತೆಲಂಗಾಣ ಕೌಳಸ ಹಿರೇಮಠದ ಒಡೆಯ ಶ್ರೀ ಬಸವಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಬಸಯ್ಯ ಶಾಸಿ, ಶಿವುಕುಮಾರ ಹಿರೇಮಠ ಮಂತ್ರ ಪಠಣ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಮಲ್ಲಣ್ಣ ಮಾಸ್ಟರ್​, ಶಿವಶರಣಪ್ಪ ರೇಷ್ಮಿ, ರವೀಂದ್ರ ಸಜ್ಜನಶೆಟ್ಟಿ, ವೀರಭದ್ರಪ್ಪ ಹುಮನಾಬಾದ್​, ಬಸವರಾಜ ಹೂಗಾರ, ಚಂದ್ರಶೇಖರ ಉಟಗೂರ, ಸೋಮಶೇಖರ ಯದಲಾಪುರ, ರಾಜಶೇಖರ ಬಳ್ಳಾ, ರವೀಂದ್ರ ಗೊಬ್ಬೂರ, ಮಹೇಶ, ಸಂಗಮೇಶ ರೋಣದ, ಬಸವರಾಜ ಸಂಕನೂರ, ಶರಣಗೌಡ ಮುದನೂರ, ವಾಸುದೇವ ಗಂಜಿ, ಮಹಾದೇವ ಅಂಗಡಿ, ದೇವಿಂದ್ರ ಸಜ್ಜನಶೆಟ್ಟಿ, ರೇಣುಕಾ, ರಾಜು ಸಂಕನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net