ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಪಂ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚನ್ನೂರ ಅವರು ರೈತರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿ ಶಾಂತಗೊಳಿಸಿದರು. ಎಇಇ ಮಾರ್ಕಂಡೇಶ್ವರ, ಸೆಕ್ಷನ್ ಆಫೀಸರ್ ಥಾಮಸ್, ದೇವಪ್ಪ ಮತ್ತು ಸಿಬ್ಬಂದಿ ಇದ್ದರು. ಅಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೂಡ ರೈತರನ್ನು ಸಮಜಾಷಿಸಿದರು. ಬೆಂಡೆಬಂಬಳಿ, ಗೊಂದೆನೂರ, ಚನ್ನೂರ, ಕೊಂಕಲ್, ತುಮಕೂರು, ಮಾಚನೂರ, ಬಿಳ್ಹಾರ, ಕಂದಳ್ಳಿ, ಕುರಿಹಾಳ, ಅರ್ಜುಣಗಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚೇತನ ಸಾಹುಕಾರ, ರವಿ ಚನ್ನೂರ, ನರಸಿಂಹರಾಜು, ಮಂಜುನಾಥರಡ್ಡಿ ಚನ್ನೂರ, ಅಮಾತೆಪ್ಪ ಹುಬ್ಬಳ್ಳಿ, ಶಿವುಗೌಡ ಕುರಿಹಾಳ, ಉಮೇಶ ಪಾಟೀಲ್, ಶಾಂತಪ್ಪ ಅಂಗಡಿ, ದೇವಪ್ಪ ಚನ್ನೂರ ಸೇರಿದಂತೆಯೇ ಇತರರಿದ್ದರು. ಸ್ಥಳದಲ್ಲಿ ಹೆಚ್ಚಿನ ಪೊಲೀಸರಿದ್ದು ಬಂದೋಬಸ್ತ ಮಾಡಿದ್ದರು.