Farmers, economic, development, agriculture, project, cooperative, Ramadurga

ರಾಮದುರ್ಗ ತಾಪಂ ಸಭಾಭವನದಲ್ಲಿ ಕಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಕಾರ್ಯಕ್ರಮಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಚಾಲನೆ ನೀಡಿದರು. ಎಚ್​.ಡಿ.ಕೊಳೇಕರ, ವೆ.ಎಚ್​.ಪಾಟೀಲ, ಶಂಕರಗೌಡ ಪಾಟೀಲ, ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬೀಡಕಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ ಇತರರಿದ್ದರು.
ರಾಮದುರ್ಗ ತಾಪಂ ಸಭಾಭವನದಲ್ಲಿ ಕಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಕಾರ್ಯಕ್ರಮಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಚಾಲನೆ ನೀಡಿದರು. ಎಚ್​.ಡಿ.ಕೊಳೇಕರ, ವೆ.ಎಚ್​.ಪಾಟೀಲ, ಶಂಕರಗೌಡ ಪಾಟೀಲ, ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬೀಡಕಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ರಾಜ್ಯ ಸರ್ಕಾರ ರೆತರಿಗಾಗಿ ಕಷಿ ಇಲಾಖೆ ಮುಖಾಂತರ ಕಷಿ ಹೊಂಡ ನಿರ್ಮಾಣ, ಹನಿ ನೀರಾವರಿ ಅಳವಡಿಕೆಗೆ ಸಹಾಯಧನ, ಕಷಿ ಭಾಗ್ಯ ಯೋಜನೆ ಸೇರಿದಂತೆ ಹಲವು ಸೌಲಭ್ಯ ಒದಗಿಸುತ್ತಿದ್ದು, ರೆತರು ಅವುಗಳ ಸದ್ಭಳಕೆ ಮಾಡಿಕೊಂಡು ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಶಾಸಕ ಅಶೋಕ ಪಟ್ಟಣ ಕರೆ ನೀಡಿದರು.
ನಗರದ ತಾಪಂ ಸಭಾಭವನದಲ್ಲಿ ಜಿಪಂ, ಕಷಿ ಇಲಾಖೆ ನೇತತ್ವದಲ್ಲಿ ರೆತರಿಗೆ ರಿಯಾಯಿತಿ ದರದಲ್ಲಿ ಬೀಜಗಳ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ರೆತರಿಗೆ ಕಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿ ಉತ್ತಮ ಕಷಿ ಚಟುವಟಿಕೆ ಕೆಗೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಬೆಳಗಾವಿ ಜಿಲ್ಲಾ ಕಷಿ ಜಂಟಿ ನಿರ್ದೇಶಕ
ಎಚ್​.ಡಿ.ಕೊಳೇಕರ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ರೆತ ಸಂಪರ್ಕ ಕೇಂದ್ರ ಸೇರಿದಂತೆ 10 ಕೇಂದ್ರಗಳ ಮುಖಾಂತರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. ತಾಲೂಕಿನ ರೆತರ ಬಿತ್ತನೆಗೆ ಅಗತ್ಯ ಬೀಜ ದಾಸ್ತಾನು ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಸುಮಾರು 64 ಸಾವಿರ ಹೆಕ್ಟರ್​ ಭೂ ಪ್ರದೇಶದಲ್ಲಿ ಬಿತ್ತನೆ ಮಾಡುವ ನಿರೀೆ ಇದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಸಾಯನಿಕ ಗೊಬ್ಬರ ಉತ್ಪಾದನೆಗೆ ಕಚ್ಛಾ ವಸ್ತುಗಳ ಸರಕು ಸಾಗಣೆಗೆ ತೊಂದರೆಯಾಗುತ್ತಿದೆ. ರಾಸಾಯನಿಕ ಗೊಬ್ಬರ ಅತಿಯಾದ ಬಳಕೆ ಕಡಿಮೆ ಮಾಡಿ, ಸಾವಯವ ಕೊಬ್ಬರ ಬಳಕೆ ಮಾಡಿ ಎಂದು ಕರೆ ನೀಡಿದರು.
ಕಷಿಕ ಸಮಾಜದ ಅಧ್ಯ ವೆ.ಎಚ್​.ಪಾಟೀಲ, ರೆತ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿದರು. ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬೀಡಕಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ ಇತರರಿದ್ದರು. ಸಹಾಯಕ ಕಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ಸ್ವಾಗತಿಸಿದರು. ಗೋವಿಂದರಡ್ಡಿ ಜಾಯಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net