ಬಸವಕಲ್ಯಾಣ: ನಾರಾಯಣಪುರ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವೇದಿಕೆ ಮೇಲಿನ ಅಭಿವ್ಯಕ್ತಿ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಶನಿವಾರ ಸಂಜೆ ಫ್ಯಾನ್ಸಿ ಡ್ರೆಸ್ ವಿತ್ ಡೈಲಾಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಅರಾವಳಿ, ನೀಲಗಿರಿ, ಶಿವಾಲಿಕ್ ಹಾಗೂ ಉದಯಗಿರಿ ಸದನಗಳ ವಿದ್ಯಾರ್ಥಿ&-ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿ, ವಿವಿಧ ಮಹನೀಯರು, ಐತಿಹಾಸಿಕ ವ್ಯಕ್ತಿಗಳು ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ವೇಷಭೂಷಣಗಳೊಂದಿಗೆ ಸಂಭಾಷಣೆ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸ್ಪರ್ಧೆಯಲ್ಲಿ ಉದಯಗಿರಿ ಸದನದ ಗಜಾನಂದ ಮತ್ತು ಅವರ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ. ಅರಾವಳಿ ಸದನದ ಸಾಯಿಪ್ರಸಾದ್ ಮತ್ತು ಅವರ ತಂಡ ದ್ವೀತಿಯ ಸ್ಥಾನ, ಬಸವಪ್ರಿಯ ಮತ್ತು ಆರತಿ ತೃತೀಯ ಸ್ಥಾನ ಪಡೆದರು. ಶಿಕ್ಷಕರಾದ ಪ್ರಿಯಾಂಕಾ ಚೇತನಕುಮಾರ ಜಂಬಗಿ, ಕಿರಣ ಪತ್ತಾರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಾಚಾರ್ಯ ನಾಗರಾಜನ್ ವಿಜೇತರಿಗೆ ಅಭಿನಂದಿಸಿ, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಲಕ್ಷಿ$್ಮಕಾಂತ ದುದ್ದಣಿಗಿ, ಸತೀಶಕುಮಾರ ಸ್ವಾಮಿ, ಸಂಯೋಜಕ ಹಾಗೂ ಸಹಪಠ್ಯ ಚಟುವಟಿಕೆಗಳ ಪ್ರಭಾರಿ ಧರ್ಮಣ್ಣ ಚಿಟ್ಟಾ, ಸಹನಾ ಇದ್ದರು. ಕು. ತೃಪ್ತಿ ಪಾಟೀಲ್ ಹಾಗೂ ಕು. ಖುಷಿ ನಿರೂಪಣೆ ಮಾಡಿದರು. ಕು. ನಯನ ವಂದಿಸಿದರು.