ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ 3341 ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಿದ್ದಾರೆ. ಇದಕ್ಕೆ ರೈತರಿಗೆ ಒಟ್ಟು 142 ಕೋಟಿ ರೂ. ಪಾವತಿಸಬೇಕಿತ್ತು. ಆದರೆ ಈವರೆಗೆ ಕೇವಲ 100 ಕೋಟಿ ರೂ. ಮಾತ್ರ ಪಾವತಿಸಲಾಗಿದೆ. ಇನ್ನೂ 42 ಕೋಟಿ ರೂ. ಬಾಕಿ ಇದೆ. ಈ ಹಣ ಬಿಡುಗಡೆಗೆ ಅನೇಕ ಸಲ ರೈತರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆಗ ರೈತರು ನನ್ನನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ನಾನೇ ಖುದ್ದಾಗಿ ಆಡಳಿತ ಮಂಡಳಿಯವರಿಗೆ ದೂರವಾಣಿ ಮೂಲಕ ಮಾತಾಡಿದಾಗ ಕಳೆದ ಫೆಬ್ರವರಿ ತಿಂಗಳಲ್ಲಿ ಪಾವತಿಸುವುದಾಗಿ ಹೇಳಿದರು. ಆದರೆ ಏಪ್ರೀಲ್ ತಿಂಗಳು ಮುಗಿಯುತ್ತ ಬಂದರೂ ಹಣ ರೈತರಿಗೆ ಪಾವತಿಸಿಲ್ಲ ಎಂದು ಡಿಸಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಕೂಡಲೇ ಆಡಳಿತ ಮಂಡಳಿಗೆ ಈ ಕುರಿತು ಮಾತಾಡಿ, ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.