ನಾಯಕತ್ವ, ಜವಾಬ್ದಾರಿ ಬೆಳೆಸಲು ಅನುಕೂಲ

ಮಣ್ಣೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್​ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು. ನಿಂಗಪ್ಪ ಪೂಜಾರಿ, ನಿಂಗಣ್ಣ ವಾಗ್ದರಿ, ಮಲ್ಲಿಕಾರ್ಜುನ ಮಾಳಿ, ಭೀಮಣ್ಣ ಬದನೆಕಾಯಿ, ಅಣ್ಣಾ ಸಾಹೇಬ ಮೈಲಗೊಂಡ ಇತರರಿದ್ದರು.
ಮಣ್ಣೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್​ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು. ನಿಂಗಪ್ಪ ಪೂಜಾರಿ, ನಿಂಗಣ್ಣ ವಾಗ್ದರಿ, ಮಲ್ಲಿಕಾರ್ಜುನ ಮಾಳಿ, ಭೀಮಣ್ಣ ಬದನೆಕಾಯಿ, ಅಣ್ಣಾ ಸಾಹೇಬ ಮೈಲಗೊಂಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ನಿಂಗಪ್ಪ ಪೂಜಾರಿ ಅನಿಸಿಕೆ
  • ಮಣ್ಣೂರ ಶಾಲೆಯಲ್ಲಿ ಸಂಸತ್​ ರಚನೆ
ಕರಜಗಿ: ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್​ ಚುನಾವಣೆ ಶುಕ್ರವಾರ ಅರ್ಥಪೂರ್ಣವಾಗಿ ನಡೆಯಿತು.
ಸುಗಲಾ ಕುಂಬಾರ (ಶಾಲಾ ನಾಯಕಿ), ಪವನ ಸಾಲೂಟಗಿ (ಶಾಲಾ ನಾಯಕ), ಸುಷ್ಮಿತಾ ನಾವಾಡಿ (ಕ್ರೀಡಾ), ಅನಸ್​ ಸೊರಟೆ (ಗ್ರಂಥಾಲಯ), ಪ್ರತಿಾ ಹರಿಜನ (ಸ್ವಚ್ಛತಾ), ಐಶ್ವರ್ಯ ನಿವರಗಿ (ಆಹಾರ), ಸಮರ್ಥ ಕಲಶೆಟ್ಪಿ (ಕುಡಿವ ನೀರು), ಪ್ರತಿಭಾ ಮಂಗಳೂರ (ಆರೋಗ್ಯ), ವರ್ಷಾ ಹಡಪದ (ಅರಣ್ಯ ಮತ್ತು ಪರಿಸರ) ಶಾಲಾ ಸಂಸತ್​ಗೆ ಆಯ್ಕೆಯಾದರು.
ಮುಖ್ಯಗುರು ನಿಂಗಪ್ಪ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಜವಾಬ್ದಾರಿ ಬೆಳಸುವ ಉದ್ದೇಶದಿಂದ ಶಾಲಾ ಸಂಸತ್​ ರಚನೆ ಕಾರ್ಯಚಟುವಟಿಕೆ ನಡೆಸಲಾಗಿದೆ. ಸಿಬ್ಬಂದಿ ಜತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಪ್ರಮುಖರಾದ ನಿಂಗಣ್ಣ ವಾಗ್ದರಿ, ಮಲ್ಲಿಕಾರ್ಜುನ ಮಾಳಿ, ಭೀಮಣ್ಣ ಬದನೆಕಾಯಿ, ಅಣ್ಣಾ ಸಾಹೇಬ ಮೈಲಗೊಂಡ, ರೇವಣಸಿದ್ದಪ್ಪ ದುದಗಿ, ಯಲ್ಲಪ್ಪ ಪ್ಯಾಟಿ, ಗಂಗಾಧರ ಪೋತದಾರ, ಬಸವರಾಜ ವರನಾಳ, ಕಾವೇರಿ ಹೀರೆಮಠ, ಸವಿತಾ ಕೊಣ್ಣೂರ, ಬೇಬಿ ರಾಠೋಡ್​, ಮೇಘಾ ತಳವಾರ, ಸವಿತಾ ಕರೂಟಿ, ಕವಿತಾ ಕರೂಟಿ, ರೇಣುಕಾ ದೈತನ, ಮಾದೇಶ ಬಬಲಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net