ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮಕ್ಕೆ ಕೃಷಿ ವಿಶ್ವವಿದ್ಯಾಲಯದ ತಜ್ಞರು ಭೇಟಿ ನೀಡಿ ಕಸ್ಕೋಟಾ ಕುರಿತು ಪರಿಶೀಲನೆ ನಡೆಸಿದರು. ಡಾ.ಆನಂದರಾವ್ ಪೊಲೀಸ್ ಪಾಟೀಲ್, ಗೋಪಾಲ, ಅಭಿಲಾಷ ಸುಬೇದಾರ, ಸುಮಾ ಪಾಟೀಲ್, ಸರೋಜಾ ಇತರರಿದ್ದರು.
ಚಿಂಚೋಳಿ: ಗಾರಂಪಳ್ಳಿ ಗ್ರಾಮದಲ್ಲಿ ಕಸ್ಕೋಟಾ ಕಳೆ ನಿಯಂತ್ರಣಕ್ಕಾಗಿ ಕೃಷಿ ಇಲಾಖೆ ಕೈಗೊಂಡಿದ್ದ ಪ್ರಾಯೋಗಿಕ ಬಿತ್ತನೆ ವಿಫಲವಾಗಿದ್ದು, ರೈತ ಮಹಿಳೆಯೊಬ್ಬರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆ ಸಂಪೂರ್ಣ ಹಾನಿಗೊಳಗಾಗುವ ಸ್ಥಿತಿ ನಿರ್ಮಾಣವಾಗಿದೆ.
ಕಸ್ಕೋಟಾ ಪರೋಪಜೀವಿ ಕಳೆಯಾಗಿದ್ದು, ಬೆಳೆಗಳ ಪೋಷಕಾಂಶವನ್ನು ಹೀರಿ ಅವುಗಳನ್ನು ಒಣಗಿಸುವ ಸಾಮರ್ಥ್ಯ ಹೊಂದಿದೆ. ಕಳೆ ನಿಯಂತ್ರಣಕ್ಕಾಗಿ ಕೃಷಿ ಇಲಾಖೆ ಆಧುನಿಕ ಕಳೆನಾಶಕ ಹಾಗೂ ಪರ್ಯಾಯ ವಿಧಾನಗಳನ್ನು ಬಳಸಿಕೊಂಡು ಗಾರಂಪಳ್ಳಿಯ ಜಮೀನಿನಲ್ಲಿ ಪ್ರಾಯೋಗಿಕ ಬಿತ್ತನೆ ಕೈಗೊಂಡಿತ್ತು. ಆದರೆ ಸೂಕ್ತ ಮೇಲ್ವಿಚಾರಣೆ ಹಾಗೂ ಸಕಾಲಿಕ ನಿರ್ವಹಣೆ ಇಲ್ಲದ ಕಾರಣ ಕಸ್ಕೋಟಾ ಮತ್ತಷ್ಟು ವ್ಯಾಪಿಸಿ ಬೆಳೆಗಳಿಗೆ ಹಾನಿ ಉಂಟಾಗಿದೆ ಎಂದು ರೈತರು ದೂರಿದ್ದಾರೆ.
ಸಮಸ್ಯೆ ತೀವ್ರಗೊಂಡ ಹಿನ್ನೆಲೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ಕೃಷಿ ತ ಡಾ.ಆನಂದರಾವ್ ಪೊಲೀಸ್ ಪಾಟೀಲ್ ಹಾಗೂ ಅಧಿಕಾರಿಗಳ ತಂಡ ಸೋಮವಾರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಜ್ಞರು ಮಾತನಾಡಿ, ಕಸ್ಕೋಟಾ ಕಳೆಯ ಬೀಜಗಳು ಮಣ್ಣಿನಲ್ಲಿ ದೀರ್ಕಾಲ ಜೀವಂತವಾಗಿರುವುದರಿಂದ ಕೇವಲ ಪ್ರಾಯೋಗಿಕ ಬಿತ್ತನೆ ಮೂಲಕ ಕಳೆ ನಿಯಂತ್ರಿಸುವುದು ಕಷ್ಟ. ಕಳೆ ನಿಯಂತ್ರಣಕ್ಕೆ ಬೆಳೆ ಪರಿವರ್ತನೆ ಹಾಗೂ ಸೂರ್ಯನ ಶಾಖದ ಮೂಲಕ ಮಣ್ಣಿನ ಶುದ್ಧೀಕರಣದಂತಹ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕಸ್ಕೋಟಾ ಪೀಡಿತ ಸಸ್ಯಗಳನ್ನು ತಣವೇ ಕಿತ್ತು ನಾಶಪಡಿಸುವುದು, ಅಗತ್ಯವಿದ್ದಲ್ಲಿ ಸುಟ್ಟುಹಾಕುವುದು ಅಥವಾ ಸೂಕ್ತ ರೀತಿಯಲ್ಲಿ ಭೂಮಿಯಲ್ಲಿ ಹೂತುಹಾಕುವಂತೆ ಸೂಚನೆ ನೀಡಿದರು.
ಕಸ್ಕೋಟಾ ನಿಮೂರ್ಲನೆಗೆ ಸಂಬಂಧಿಸಿದ ವರದಿಯನ್ನು ಕೃಷಿ ವಿಾನ ಸಂಶೋಧನಾ ಸಂಸ್ಥೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಅನುಮೋದನೆ ಬಳಿಕ ಮುಂದಿನ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಚಿಮ್ಮನಚೋಡ ಕೃಷಿ ಅಧಿಕಾರಿ ಅಭಿಲಾಷ ಸುಬೇದಾರ, ಸುಮಾ ಪಾಟೀಲ್, ಸರೋಜಾ, ರ್ಮುಣಿ ಮಾಳಗಿ, ಇನಾಯಿತ್ ಅಲಿ, ರಜನಿಕಾಂತ ಬುಳ್ಳಾ, ಲಕ್ಷ್ಮಣ ಮುಸ್ತಾರಿ, ಸುರೇಶ ದಂಡಿನ ಇತರರಿದ್ದರು.