ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗಮನ ಸೆಳೆಯುತ್ತಿದೆ ಇಂಡಿಯನ್ ಆರ್ಟಿಸನ್ಸ್ ಬಜಾರ್ ವಸ್ತು ಪ್ರದರ್ಶನ- Indian Artisans Bazaar

ಇಂಡಿಯನ್ ಆರ್ಟಿಸನ್ಸ್ ಬಜಾರ್
ಇಂಡಿಯನ್ ಆರ್ಟಿಸನ್ಸ್ ಬಜಾರ್
Published on
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಗ್ರ್ಯಾಂಡ್ ಫ್ಲೀ ಮಾರ್ಕೆಟ್ ಆಯೋಜಿಸಲಾಗಿರುವ ಇಂಡಿಯನ್ ಆರ್ಟಿಸನ್ಸ್ ಬಜಾರ್ ವಸ್ತು ಪ್ರದರ್ಶನವು ನೋಡುಗರ ಗಮನ ಸೆಳೆಯುತ್ತಿದೆ.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕುಶಲಕರ್ಮಿಗಳು, ಕಲಾವಿದರು ಹಾಗೂ ಸಣ್ಣ ಉದ್ಯಮಿಗಳಿಗೆ ತಮ್ಮ ಕೈಚಳಕದ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಈ ಮೇಳ ಉತ್ತಮ ವೇದಿಕೆಯಾಗಿದೆ. ಹಸ್ತಕಲಾ, ಸಾಂಪ್ರದಾಯಿಕ ಉತ್ಪನ್ನಗಳು, ಆಭರಣಗಳು, ಗೃಹ ಅಲಂಕಾರ ವಸ್ತುಗಳು, ಉಡುಪು ಸೇರಿ ವಿವಿಧ ಉತ್ಪನ್ನಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಭಾರತೀಯ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ.ಸ್ಥಳೀಯವಾಗಿ ತಯಾರಾಗುವ ಕೈಚಳಕದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಬೆಂಬಲಿಸುವಂತೆ ಲೈಫ್​​ಸ್ಟೈಲ್ ಕ್ರಿಯೇಟರ್ ಪ್ರಿಯಾಂಕಾ ಅಗರ್ವಾಲ್ ಹೇಳಿದರು.
ಜೂ 14ವರೆಗೆ ಈ ಮೇಳ ಮುಂದುವರಿಯಲಿದ್ದು, ವಿವಿಧ ರೀತಿಯ ಹಸ್ತಕಲಾ ಹಾಗೂ ಸೃಜನಾತ್ಮಕ ಉತ್ಪನ್ನ ವೀಕ್ಷಿಸಿ ಖರೀದಿಬಹುದು. ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಸಂದರ್ಶಕರು ಮತ್ತು ಖರೀದಿದಾರರು ಭಾಗವಹಿಸಿದರು. ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರು ಮತ್ತು ಉದ್ಯಮಿಗಳು ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net