ಶಿಕ್ಷಕರ ಹಾಜರಾತಿ, ಎಲ್‌ಬಿಎ ಪಾಠ ಆಧಾರಿತ ಮೌಲ್ಯಾಂಕನವನ್ನು ಅಪ್‌ಡೇಟ್ ಮಾಡುವುದು, ಸೇತುಬಂಧ ಪರೀಕ್ಷೆಗಳ ಗ್ರೇಡ್ ನಮೂದು, ಮಾಸಿಕ, ಮಧ್ಯವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳ ಗ್ರೇಡ್ ನಮೂದು, ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶೂ ವಿತರಣೆ ಮಾಹಿತಿ, ಬಿಸಿಯೂಟ ವಿತರಣೆಯ ಮಾಹಿತಿ ನಮೂದು, ಸ್ಯಾಟ್ಸ್ ದಾಖಲಾತಿ, ಬಿಎಲ್‌ಒ ಚುನಾವಣಾ ಕಾರ್ಯಗಳು, ವಿಶೇಷ ಚೇತನ ಮಕ್ಕಳ ಮಾಹಿತಿ ಆ್ಯಪ್ ಜತೆಗೆ ಮಕ್ಕಳ ವಿದ್ಯಾರ್ಥಿವೇತನ, ವಿವಿಧ ಬಹುಮಾನಗಳ ಯೋಜನೆಗಳ ಅಪ್‌ಡೇಟ್ಸ್‌ಗಳನ್ನು ಆನ್‌ಲೈನ್ ಮೂಲಕ ದತ್ತಾಂಶಗಳನ್ನು ದಾಖಲಿಸುವುದು ಶಿಕ್ಷಕರಿಗೆ ಸವಾಲಾಗಿದೆ ಎನ್ನುತ್ತಾರೆ ಶಿಕ್ಷಕರು.