ಎಲ್ಲರೂ ಸಂಚಾರ ನಿಯಮ ಪಾಲಿಸಿ

ಬೈಲಹೊಂಗಲ ನಗರದ ಆರ್​ಟಿಒ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರತಾ ಜಾಗೃತಿ ಮಾಸಾಚರಣೆಯಲ್ಲಿ ಆರ್​ಟಿಒ ಜಯಾನಂದ ನರಸನ್ನವರ ಮಾತನಾಡಿದರು. ಮಹಾಂತೇಶ ತುರಮರಿ, ಅನಿಲ ಪಾತ್ರೋಟ ಇತರರಿದ್ದರು.
ಬೈಲಹೊಂಗಲ ನಗರದ ಆರ್​ಟಿಒ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರತಾ ಜಾಗೃತಿ ಮಾಸಾಚರಣೆಯಲ್ಲಿ ಆರ್​ಟಿಒ ಜಯಾನಂದ ನರಸನ್ನವರ ಮಾತನಾಡಿದರು. ಮಹಾಂತೇಶ ತುರಮರಿ, ಅನಿಲ ಪಾತ್ರೋಟ ಇತರರಿದ್ದರು.
Published on
ಬೈಲಹೊಂಗಲ: ಪ್ರತಿಯೊಬ್ಬರೂ ಹೆಲ್ಮೆಟ್​, ಸೀಟ್​ಬೆಲ್ಟ್​ ಬಳಸಬೇಕು, ಅತಿಯಾದ ವೇಗ ಹಾಗೂ ಮದ್ಯಪಾನದಿಂದ ದೂರವಿರಬೇಕು ಎಂದು ಪುರಸಭೆ ಮಾಜಿ ಉಪಾಧ್ಯ ಮಹಾಂತೇಶ ತುರಮರಿ ಹೇಳಿದರು.
ನಗರದ ಆರ್​ಟಿಒ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರತಾ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒತ್ತಡದ ಜೀವನದಲ್ಲಿ ಸಾರ್ವಜನಿಕರು ವೇಗವಾಗಿ ವಾಹನ ಓಡಿಸುತ್ತಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ರಸ್ತೆ ಸುರತಾ ನಿಯಮ ಪಾಲಿಸಿ, ಅಮೂಲ್ಯ ಜೀವ ರಣೆ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯಾನಂದ ನರಸನ್ನವರ ಮಾತನಾಡಿ, ಜನವರಿ ತಿಂಗಳಿಡಿ ರಸ್ತೆ ಸುರತೆ ಕುರಿತು ಜಾಗೃತಿ ಅಭಿಯಾನ, ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಹಕಾರದಿಂದ ಅಪಘಾತ ತಡೆಯಲು ಸಾಧ್ಯವಾಗುತ್ತದೆ ಎಂದರು.
ರಸ್ತೆ ಸುರತೆ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೋಟಾರ್​ ವಾಹನ ನಿರೀಕ ಅನಿಲ ಪಾತ್ರೋಟ, ಪ್ರಾಚಾರ್ಯ ಶ್ರೀಧರ ನಿರಡಿ ಮಾತನಾಡಿದರು. ಪಶುವೈದ್ಯ ವಿ.ಜಿ.ಸಜ್ಜನ, ಕೀರ್ತಿ ಹುಕ್ಕೇರಿ ಇತರರಿದ್ದರು. ರಶ್ಮಿ ಜಕ್ಕನ್ನವರ ಸ್ವಾಗತಿಸಿ. ದೀಪಾ ಹಣ್ಣಿಕೇರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net