ಪರಿಸರ ಸಂರಕ್ಷಣೆಗೆ ಎಲ್ಲರೂ ಶ್ರಮಿಸಿ

ಔರಾದ್​ ತಾಲೂಕಿನ ಸಂತಪುರ ದೀಪಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ  ಆರ್​ಎ್​ಒ ಎಂ.ಡಿ.ಮುದಾಸಿರ್​, ಎಎಸ್​ಐ ಏಕನಾಥ, ಶ್ರೀನಾಥ, ಶಿವಕಾಂತಯ್ಯ ಮಠಪತಿ, ಸಿಸ್ಟರ್​ ಪ್ರೀತಿ ಹಾಗೂ ಮಕ್ಕಳಿದ್ದರು.
ಔರಾದ್​ ತಾಲೂಕಿನ ಸಂತಪುರ ದೀಪಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಆರ್​ಎ್​ಒ ಎಂ.ಡಿ.ಮುದಾಸಿರ್​, ಎಎಸ್​ಐ ಏಕನಾಥ, ಶ್ರೀನಾಥ, ಶಿವಕಾಂತಯ್ಯ ಮಠಪತಿ, ಸಿಸ್ಟರ್​ ಪ್ರೀತಿ ಹಾಗೂ ಮಕ್ಕಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಎಫ್​ಒ ಎಂ.ಡಿ.ಮುದಾಸಿರ್​ ಕರೆ
  • ಸಂತಪುರದಲ್ಲಿ ವನಮಹೋತ್ಸವ
ಔರಾದ್​: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಪರಿಸರ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಆರ್​ಎಫ್​ಒ ಎಂ.ಡಿ.ಮುದಾಸಿರ್​ ಹೇಳಿದರು.
ತಾಲೂಕಿನ ಸಂತಪುರ ದೀಪಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿಗೊಳಿಸಬೇಕು. ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಮಾಡುವುದು ತಿಳಿಸಬೇಕು ಎಂದರು.
ಮುಖ್ಯಗುರು ಸಿಸ್ಟರ್​ ಪ್ರೀತಿ ಮಾತನಾಡಿ, ಪರಿಸರ ಇಲ್ಲದೆ ಏನೂ ಇಲ್ಲ. ಉಸಿರಾಡಲು ಬದುಕಲು ಆಗುವುದಿಲ್ಲ. ಪ್ರತಿಯೊಬ್ಬರೂ ಪರಿಸರ ಜಾಗೃತಿಗೆ ಕೈಜೋಡಿಸಬೇಕು. ನೆಲ ಜಲ, ಕಾಡು ಉಳಿದರೆ ನಾಡು ಉಳಿಯುತ್ತದೆ. ಇಂದಿನ ದಿನಗಳಲ್ಲಿ ಮರಗಳನ್ನು ಕಡಿದು, ದೊಡ್ಡ ದೊಡ್ಡ ರೆಸಾರ್ಟ್ಸ್​ ಮತ್ತು ಹೋಂಸ್ಟೇ ಮಾಡುತ್ತಿರುವುದು ಪರಿಸರಕ್ಕೆ ಹಾನಿಯುಂಟು ಮಾಡುವ ಆತಂಕ ಎದುರಾಗಿದೆ. ಪ್ರತಿಜ್ಞೆ ಮಾಡಿ ಮರಗಳ ಸಂರಕ್ಷಣೆ ಮತ್ತು ಮರಗಳ ನೆಟ್ಟು ಬೆಳೆಸುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಎಎಸ್​ಐ ಏಕನಾಥ, ಶ್ರೀನಾಥ, ಶಿವಕಾಂತಯ್ಯ ಮಠಪತಿ, ಸಿ.ರೇಷ್ಮಾ, ಸಿ.ಜನೆತ, ಮಾರಿಯಾ ಶಾಂತಿ ಇತರರಿದ್ದರು. ಶಾಲೆಯ ಮಕ್ಕಳಿಂದ ಪರಿಸರಕ್ಕೆ ಸಂಬಂಧಿಸಿದ ಕಿರುಚಿತ್ರ ಮತ್ತು ನಾಟಕ ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net